'ಕೆಪಿಎಂಇ ಪೋರ್ಟಲ್‌ನಲ್ಲಿ ನೋಂದಣಿ' ಖಾಸಗಿ ಆಸ್ಪತ್ರೆಗಳಿಗೆ ದ.ಕ. ಜಿಲ್ಲಾಡಳಿತ ಸೂಚನೆ
ಮಂಗಳೂರು : ಸರ್ಕಾರವು ಕೋವಿಡ್ ರೋಗಿಗಳಿಗೆ ಸೂಕ್ತ ಹಾಗೂ ಸುಲಭ ರೀತಿಯಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ರೆಮೆಡಿಸಿವಿರ್ ಔಷಧ ಮತ್ತು ವೈದ್ಯಕೀಯ ಆಮ್ಲಜನಕ ಅಗತ್ಯವಿರುವ ರೋಗಿಗಳಿಗೆ ದೊರಕುವಂತೆ ಮಾಡಲು ಎಲ್ಲಾ ಖಾಸಗಿ ಆಸ್ಪತ್ರೆಯವರು ಕೆಪಿಎಂಇ ಪೋರ್ಟಲ್‌ನಲ್ಲಿ ನೋಂದಣಿಮಾಡಬೇಕು ಎಂದು ಸೂಚನೆ ನೀಡಿದೆ.
ಪ್ರತೀ ದಿನ ರೋಗಿಗಳ ಎಸ್‌ಆರ್‌ಎಫ್ ಐಡಿಯೊಂದಿಗೆ ಆನ್‌ಲೈನ್ ರೆಮೆಡಿಸಿವಿರ್ ಔಷಧ ಕೊರತೆ ಸಲ್ಲಿಸಬೇಕು ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಮೂಲಕ ಬೇಡಿಕೆ ಸಲ್ಲಿಸಹೇಕು. ನೋಂದಣಿ ಆಗದೇ ಇರುವ ಆಸ್ಪತ್ರೆಗಳು ರೆಮೆಡಿಸಿವಿರ್ ಔಷಧ ಮತ್ತುವೈದ್ಯಕೀಯ ಆಮ್ಲಜನಕಕ್ಕೆ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಲು ಸಾಧ್ಯವಿಲ್ಲ.ಅಂತಹ ಆಸ್ಪತ್ರೆಗಳಿಗೆ ಔಷಧ ಮತ್ತು ಆಮ್ಲಜನಕ ಪೂರೈಕೆ ಸಾಧ್ಯವಿಲ್ಲ. ರೋಗಿಗಳಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ನೇರವಾಗಿ ರೆಮೆಡಿಸಿವಿರ್ ಔಷಧ ಬೇಡಿಕೆ ಬಂದಲ್ಲಿ ಪರಿಗಣಿಸಲಾಗುವುದಿಲ್ಲ. ಸಂಬಂಧಪಟ್ಟ ಆಸ್ಪತ್ರೆ ಹಾಗೂ ವೈದ್ಯರ ಮುಖಾಂತರ ಮೇಲೆ ತಿಳಿಸಿರುವ ವೆಬ್‌ಲಿಂಕ್ https://kpme.karnataka.gov.in ಮೂಲಕ ಬೇಡಿಕೆ ಸಲ್ಲಿಸಿದಲ್ಲಿ ಮಾತ್ರ ರೆಮೆಡಿಸಿವಿರ್ ಔಷಧವನ್ನು ನೇರವಾಗಿ ಆಸ್ಪತ್ರೆಗೆ ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.





