ಪಿಣರಾಯಿ ನೇತೃತ್ವದ ಸರ್ಕಾರದ ಸಾಧನೆಯ ಪರವಾಗಿ ಕೇರಳದ ಜನತೆ ಮತ ಹಾಕಿದಂತಿದೆ: ಸಿದ್ದರಾಮಯ್ಯ

ಬೆಂಗಳೂರು, ಮೇ 2: ಕೇರಳದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರುವ ಎಲ್ಲ ಸೂಚನೆಗಳಿತ್ತು. ಬಹುಷ: ಕೊರೋನ ಕಾಲದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಸಾಧನೆಯ ಪರವಾಗಿ ಅಲ್ಲಿನ ಜನತೆ ಮತ ಹಾಕಿದಂತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ದಕ್ಷಿಣದ ರಾಜ್ಯಗಳು ಎಂದೂ ಕೂಡಾ ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಪುರಸ್ಕರಿಸಿಲ್ಲ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿಗೆ ಇಲ್ಲಿಯ ವರೆಗೆ ಸ್ವಂತ ಬಲದಿಂದ ಅಧಿಕಾರ ಹಿಡಿಯಲಾಗಿಲ್ಲ. ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರ ಗಳಿಸಿದ್ದು ಪಾಪದ ಹಣದಿಂದ ನಡೆಸಿದ ' ಆಪರೇಷನ್ ಕಮಲ' ಎಂಬ ಅಡ್ಡಮಾರ್ಗದ ಮೂಲಕ ಎಂದು ತಿಳಿಸಿದ್ದಾರೆ.
Next Story





