ನಂದಿಗ್ರಾಮದಲ್ಲಿ ಮರು ಮತ ಎಣಿಕೆಗೆ ಟಿಎಂಸಿ ಮನವಿ ತಿರಸ್ಕರಿಸಿದ ಚುನಾವಣಾ ಆಯೋಗ

ಹೊಸದಿಲ್ಲಿ: ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಮರು ಮತ ಎಣಿಕೆ ಮಾಡಬೇಕೆಂಬ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಮನವಿಯನ್ನು ಚುನಾವಣಾ ಆಯೋಗವು ರವಿವಾರ ತಿರಸ್ಕರಿಸಿದೆ.
ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಮಾಜಿ ಆಪ್ತ ಬಿಜೆಪಿಯ ಸುವೇಂದು ಅಧಿಕಾರಿಯ ವಿರುದ್ಧ ಸ್ಪರ್ದಿಸಿ ಸೋಲನುಭವಿಸಿದ್ದರು.
ಎಲೆಕ್ಟ್ರಾನಿಕ್ ಮತದಾನ ಯಂತ್ರಗಳಲ್ಲಿನ ಮತಗಳೊಂದಿಗೆ ವಿವಿಪಿಎಟಿ ಸ್ಲಿಪ್‌ಗಳನ್ನು ಹೋಲಿಕೆ ಮಾಡಿದ ನಂತರ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ರಿಟರ್ನಿಂಗ್ ಅಧಿಕಾರಿ ಹೇಳಿದ್ದಾರೆ.
ರವಿವಾರ ಸಂಜೆ ಪ್ರಕಟವಾದ ಫಲಿತಾಂಶದಲ್ಲಿ ಮುಖ್ಯಮಂತ್ರಿ ಮಮತಾ ಅವರು 1,736 ಮತಗಳಿಂದ ಅಧಿಕಾರಿ ವಿರುದ್ಧ ಸೋತಿದ್ದಾರೆ.
ತೃಣಮೂಲ ಕಾಂಗ್ರೆಸ್ ಮತ ಎಣಿಕೆಯ ಪ್ರಕ್ರಿಯೆಯನ್ನು ಟೀಕಿಸಿದೆ. ಮತ ಎಣಿಕೆಯಲ್ಲಿ 'ದುಷ್ಕೃತ್ಯಗಳು' ನಡೆದಿವೆ ಎಂದು ಮಮತಾ ಆರೋಪಿಸಿದ್ದಾರೆ. ಈ ಕುರಿತು ನ್ಯಾಯಾಲಯಗಳನ್ನು ಸಂಪರ್ಕಿಸುವುದಾಗಿ ಹೇಳಿದರು.
Next Story





