ಬಂಗಾಳ, ತಮಿಳುನಾಡಿನಲ್ಲಿ ಒಂದೂ ಸೀಟು ಗೆಲ್ಲದ ಉವೈಸಿ ನೇತೃತ್ವದ ಎಐಎಂಐಎಂ

ಹೈದರಾಬಾದ್: ಎಐಎಂಐಎಂ ಪಕ್ಷ ಬಿಹಾರ ಹಾಗೂ ಮಹಾರಾಷ್ಟ್ರದಲ್ಲಿ ತೋರಿದ್ದ ಮ್ಯಾಜಿಕನ್ನು ಪಶ್ಚಿಮಬಂಗಾಳ ಹಾಗೂ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪುನರಾವರ್ತಿಸಲು ವಿಫಲವಾಗಿದೆ.
ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಪಕ್ಷವು ಪಶ್ಚಿಮಬಂಗಾಳ ಹಾಗೂ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗೆದ್ದಿಲ್ಲ. ಈ ಎರಡು ರಾಜ್ಯಗಳ ಚುನಾವಣೆಯ ಫಲಿತಾಂಶ ರವಿವಾರ ಪ್ರಕಟವಾಗಿತ್ತು.
ಎಐಎಂಐಎಂ ಪಕ್ಷ ಪಶ್ಚಿಮಬಂಗಾಳದಲ್ಲಿ 7 ಹಾಗೂ ತಮಿಳುನಾಡಿನಲ್ಲಿ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.
ಬಂಗಾಳದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ವಿಫಲವಾಗಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ತಮಿಳುನಾಡಿನಲ್ಲಿ ದಿನಕರನ್ ನೇತೃತ್ವದ ಅಮ್ಮ ಮಕ್ಕಳ್ ಕಳಗಂ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಈ ರಾಜ್ಯದಲ್ಲಿ ಖಾತೆ ತೆರೆಯಲು ವಿಫಲವಾಗಿದೆ.
ಎಐಎಂಐಎಂ ಬಿಹಾರದಲ್ಲಿ 20 ಸೀಟುಗಳಲ್ಲಿ ಸ್ಪರ್ಧಿಸಿ 5 ಸ್ಥಾನ ಗೆದ್ದುಕೊಂಡಿತ್ತು. ಮಹಾರಾಷ್ಟ್ರದಲ್ಲಿ 2019ರಲ್ಲಿ 44 ಸ್ಥಾನಗಳಲ್ಲಿ ಸ್ಪರ್ಧಿಸಿ 2 ಸೀಟುಗಳನ್ನು ಗೆದ್ದುಕೊಂಡು ಅಚ್ಚರಿಗೆ ಕಾರಣವಾಗಿತ್ತು.