ಆಕ್ಸಿಜನ್ ಬಿಕ್ಕಟ್ಟು: ಹಿಂದೂಪುರ ಆಸ್ಪತ್ರೆಯಲ್ಲಿ 8 ರೋಗಿಗಳು ಮೃತ್ಯು

ಅನಂತಪುರ: ಹಿಂದೂಪುರ ಸರಕಾರಿ ಆಸ್ಪತ್ರೆಯಲ್ಲಿ ಕನಿಷ್ಟ 8 ಕೋವಿಡ್-19 ರೋಗಿಗಳು ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿನ ಆಕ್ಸಿಜನ್ ಬಿಕ್ಕಟ್ಟಿನಿಂದಾಗಿ ಈ ಸಾವು ಸಂಭವಿಸಿದೆ ಎಂದು ರೋಗಿಗಳ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ರೋಗಿಗಳ ಸಂಬಂಧಿಕರ ಆರೋಪವನ್ನು ಆಂಧ್ರ ಸರಕಾರ ಅಲ್ಲಗಳೆದಿದೆ.
ಎಲ್ಲ ರೋಗಿಗಳನ್ನು ಆಂಧ್ರಪ್ರದೇಶದ ಹಿಂದೂಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರ ಸಂಜೆ ಹಾಗೂ ಸೋಮವಾರ ಬೆಳಗ್ಗಿನ ತನಕ ಸಾವುಗಳು ಸಂಭವಿಸಿರುವ ಕುರಿತು ವರದಿಯಾಗಿದೆ.
ಶನಿವಾರ ಅನಂತಪುರ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ 16 ರೋಗಿಗಳು ಜೀವ ಕಳೆದುಕೊಂಡಿದ್ದರು. ಆಕ್ಸಿಜನ್ ಬಿಕ್ಕಟ್ಟನ್ನು ಜಿಲ್ಲಾಡಳಿತ ನಿರಾಕರಿಸಿತ್ತು.
ಹಿಂದೂಪರ ಜಿಲ್ಲಾಸ್ಪತ್ರೆಯಲ್ಲಿ ರವಿವಾರ 140 ಆಕ್ಸಿಜನ್ ಸಿಲಿಂಡರ್ ಗಳನ್ನು ಅಳವಲಡಿಸಲಾಗಿತ್ತು ಎಂದು ಸರಕಾರ ತಿಳಿಸಿದೆ.
Next Story