ಕೋಟೆಕಾರ್ ಪಟ್ಟಣ ಪಂಚಾಯತ್ ವಾರ್ಡ್‌ವಾರು ಮೀಸಲಾತಿ ಪ್ರಕಟ
ಮಂಗಳೂರು, ಮೇ 3: ಕೋಟೆಕಾರ್ ಪಟ್ಟಣ ಪಂಚಾಯತ್‌ನ ವಾರ್ಡ್‌ವಾರು ಮೀಸಲಾತಿಯನ್ನು ರಾಜ್ಯ ಸರಕಾರ ಪ್ರಕಟಿಸಿದೆ. 17 ವಾರ್ಡ್‌ಗಳ ಪೈಕಿ 6 ಸ್ಥಾನವನ್ನು ಮಾತ್ರ ಮಹಿಳೆಯರಿಗೆ ಮೀಸಲಿಡಲಾಗಿದ್ದು, ಆ ಮೂಲಕ ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
1ನೆ ವಾರ್ಡ್‌ನಲ್ಲಿ ಸಾಮಾನ್ಯ, 2ನೆ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ಎ (ಮಹಿಳೆ), 3ನೆ ವಾರ್ಡ್‌ನಲ್ಲಿ ಸಾಮಾನ್ಯ (ಮಹಿಳೆ), 4ನೆ ವಾರ್ಡ್‌ನಲ್ಲಿ ಪರಿಶಿಷ್ಟ ಪಂಗಡ, 5ನೆ ವಾರ್ಡ್‌ನಲ್ಲಿ ಸಾಮಾನ್ಯ (ಮಹಿಳೆ), 6ನೆ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ಎ, 7ನೆ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ಬಿ, 8ನೆ ವಾರ್ಡ್‌ನಲ್ಲಿ ಸಾಮಾನ್ಯ, 9ನೆ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ಎ (ಮಹಿಳೆ), 10ನೆ ವಾರ್ಡ್‌ನಲ್ಲಿ ಸಾಮಾನ್ಯ, 11ನೆ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ಎ, 12ನೆ ವಾರ್ಡ್‌ನಲ್ಲಿ ಸಾಮಾನ್ಯ (ಮಹಿಳೆ), 13ನೆ ವಾರ್ಡ್‌ನಲ್ಲಿ ಸಾಮಾನ್ಯ, 14ನೆ ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿ, 15ನೆ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ಎ, 16ನೆ ವಾರ್ಡ್‌ನಲ್ಲಿ ಸಾಮಾನ್ಯ, 17ನೆ ವಾರ್ಡ್‌ನಲ್ಲಿ ಸಾಮಾನ್ಯ (ಮಹಿಳೆ)ರಿಗೆ ಮೀಸಲಿಡಲಾಗಿದೆ.





