ಎಡಪಕ್ಷ ಶೂನ್ಯವಾಗಿರುವುದನ್ನು ನೋಡಲು ಬಯಸಲಾರೆ: ಮಮತಾ ಬ್ಯಾನರ್ಜಿ

ಕೋಲ್ಕತಾ: "ನಾನು ಎಡಪಕ್ಷವನ್ನು ರಾಜಕೀಯವಾಗಿ ವಿರೋಧಿಸುತ್ತೇನೆ. ಆದರೆ ಆ ಪಕ್ಷವನ್ನು ಶೂನ್ಯವಾಗಿ ನೋಡಲು ಬಯಸುವುದಿಲ್ಲ" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಪ.ಬಂಗಾಳದಲ್ಲಿ ಎಡರಂಗದ 34 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿದ್ದ ಮಮತಾ ಅವರ ಈ ಹೇಳಿಕೆ ಅನಿರೀಕ್ಷಿತವಾಗಿತ್ತು.
"ಎಡಪಕ್ಷದವರು ಬಿಜೆಪಿಗೆ ಬದಲಾಗಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೆ ಅದು ಚೆನ್ನಾಗಿರುತ್ತಿತ್ತು" ಎಂದ ಮಮತಾ ಅವರು ರಾಜ್ಯ ವಿಧಾನಸಭೆಯ ವಿಪಕ್ಷ ಸ್ಥಾನದಲ್ಲಿ ಬಿಜೆಪಿಯ ಬದಲಿಗೆ ಎಡಪಕ್ಷಗಳಿಗೆ ಆದ್ಯತೆ ನೀಡುತ್ತೇನೆಂಬ ಸೂಚನೆ ನೀಡಿದರು.
294 ಸದಸ್ಯಬಲದ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್ 213 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ 77 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Next Story