Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಈ ಸಾವುಗಳು ನಿಮ್ಮ ಮನಸ್ಸಿನ ಮೇಲೆ ಏನೂ...

ಈ ಸಾವುಗಳು ನಿಮ್ಮ ಮನಸ್ಸಿನ ಮೇಲೆ ಏನೂ ಪರಿಣಾಮ ಬೀರಲಿಲ್ಲವೇ?: ಸಿಎಂಗೆ ರಮೇಶ್ ಕುಮಾರ್ ಭಾವನಾತ್ಮಕ ಪತ್ರ

ವಾರ್ತಾಭಾರತಿವಾರ್ತಾಭಾರತಿ3 May 2021 10:09 PM IST
share
ಈ ಸಾವುಗಳು ನಿಮ್ಮ ಮನಸ್ಸಿನ ಮೇಲೆ ಏನೂ ಪರಿಣಾಮ ಬೀರಲಿಲ್ಲವೇ?: ಸಿಎಂಗೆ ರಮೇಶ್ ಕುಮಾರ್ ಭಾವನಾತ್ಮಕ ಪತ್ರ

ಬೆಂಗಳೂರು, ಮೇ 3: ಚಾಮರಾಜನಗರ ಸರಕಾರಿ ಆಸ್ಪತ್ರೆಯಲ್ಲಿ ಸಂಭವಿಸಿರುವ ಸಾವುಗಳು ನಿಮ್ಮ(ಮುಖ್ಯಮಂತ್ರಿ ಯಡಿಯೂರಪ್ಪ) ಮನಸ್ಸಿನ ಮೇಲೆ ಏನೂ ಪರಿಣಾಮವನ್ನು ಬೀರಲಿಲ್ಲವೇ? ಒಂದು ಕ್ಷಣ ಕಾಲ ನಿಮ್ಮ ಸ್ಥಾನವನ್ನು ಮರೆತು ಒಬ್ಬ ಸಾಮಾನ್ಯ ಮನುಷ್ಯನಂತೆ ಇದನ್ನು ನೋಡಿದಾಗ ಸಹಜವಾಗಿಯೇ ನಿಮ್ಮಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ಪ್ರಕೃತಿ ನಿರೀಕ್ಷಿಸುತ್ತೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ನಾವು ಅಲಂಕರಿಸಿರುವ ಸ್ಥಾನಗಳು ನಮ್ಮ ಮನುಷ್ಯತ್ವಕ್ಕೆ ಹೊದಿಸಿದ ಕವಚಗಳೇ ಹೊರತು ನಮ್ಮ ಸೂಕ್ಷ್ಮತೆಯನ್ನು ನುಂಗಿಹಾಕುವ ಸಾಧನಗಳಾಗಬಾರದು ಎಂದು ಹೇಳಿದ್ದಾರೆ.

ಶಾಸಕನಾಗಿಯೇ ಆಗಲಿ, ವಿಶೇಷವಾಗಿ ಪ್ರತಿಪಕ್ಷದವರ ಆಗಿಯೇ ಆಗಲಿ ಈ ಮಾತುಗಳನ್ನಾಡುತ್ತಿಲ್ಲ. ರಾಜಕಾರಣ ತನ್ನ ಗಾಂಭೀರ್ಯವನ್ನು ಘನತೆಯನ್ನು ಸಂಪೂರ್ಣ ಕಳೆದುಕೊಂಡಿದೆ. ಕೆಲವೇ ದಿನಗಳ ಹಿಂದೆ ಮದ್ರಾಸ್ ಶ್ರೇಷ್ಠ ನ್ಯಾಯಾಲಯವು ಕೇಂದ್ರ ಚುನಾವಣಾ ಆಯೋಗದ ಕರ್ತವ್ಯ ಭ್ರಷ್ಟತೆಯ ಬಗ್ಗೆ ಆಡಿರುವ ನಿಷ್ಠುರದ ಮಾತುಗಳನ್ನು ನೀವು ಗಮನಿಸಿರಬಹುದು ಎಂದು ನಂಬಿದ್ದೇನೆ. ಇದರ ಹಿನ್ನೆಲೆಯಲ್ಲಿ ಇಂದು ನಡೆದಿರುವ ದುರಂತ ಏನೆಂದು ನಮಗೆ ಸೂಚನೆ ಕೊಡುತ್ತೆ ಎಂದು ಅವರು ತಿಳಿಸಿದ್ದಾರೆ.

ಪ್ರಾಣ ಕಳೆದುಕೊಂಡಂಥವರು, ಸಮರದಲ್ಲಿ ಸಾವನ್ನಪ್ಪಿದ ವೀರಯೋಧರಲ್ಲ ಅಥವಾ ಯಾವುದಾದರೂ ಸತ್ಯಾಗ್ರಹ ಅಥವಾ ಹೋರಾಟಕ್ಕಾಗಿ ಮಡಿದ ಹುತಾತ್ಮರೂ ಅಲ್ಲ, ಮಹಾತ್ಮರೂ ಅಲ್ಲ. ಆರೋಗ್ಯ ಬಿಗಡಾಯಿಸಿ ಅಸಹಾಯಕರಾಗಿ ಜೀವ ಅಂಗೈನಲ್ಲಿ ಇಟ್ಟುಕೊಂಡು ಪ್ರಾಣ ಉಳಿಸಿ ಕೊಳ್ಳಬೇಕೆಂಬ ಒಂದೇ ಅಪೇಕ್ಷೆಯಿಂದ ಸರಕಾರಿ ಆಸ್ಪತ್ರೆಗೆ ಬಂದ ಸಾಮಾನ್ಯ ಜನ ಎನ್ನುವುದು ಕಟುಸತ್ಯ. ಇದುವರೆವಿಗೆ ಬಂದ ವರ್ತಮಾನದ ಪ್ರಕಾರ ಆಸ್ಪತ್ರೆಯಲ್ಲಿ ಇದ್ದ ವೈಫಲ್ಯಗಳ ಕಾರಣದಿಂದ ಇವರು ಪ್ರಾಣ ಕಳೆದುಕೊಂಡಿದ್ದಾರೆ. ಸತ್ತವರು ಸಾಮಾನ್ಯ ಜನ, ಸತ್ತಿದ್ದು ಸರಕಾರಿ ಆಸ್ಪತ್ರೆಯಲ್ಲಿ. ಆದಕ್ಕೆ ಕಾರಣ ನಮ್ಮ ದಿವ್ಯ ನಿರ್ಲಕ್ಷ್ಯ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಾರಿಹೋದ ಪ್ರಾಣ ಪಕ್ಷಿಗಳ ಕುಟುಂಬಗಳ ಅವಲಂಬಿತರು ಅಥವಾ ಬಂಧುಬಳಗದವರು ದುಃಖದ ಮಡುವಿನಲ್ಲಿ ಬಿದ್ದಿದ್ದಾರೆ ಎಂದು ಆಲೋಚನೆ ಮಾಡುವ ಪ್ರಯತ್ನವನ್ನಾದರೂ ನೀವು ಮಾಡಿದ್ದೀರಾ? ಯಾರ ತಪ್ಪಿಗಾಗಿ ಯಾರಿಗೆ ಶಿಕ್ಷೆ? ಯಾರ ದರ್ಪ ಮತ್ತು ಅಹಂಕಾರಗಳಿಗೆ ಯಾರು ಬಲಿಯಾಗಿದ್ದಾರೆ? ಆಲೋಚನೆ ಮಾಡಿದ್ದೀರಾ? ಎಂದು ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.

ಸತ್ತ ಕುಟುಂಬಗಳಿಗೆ ಒಂದು ವೇಳೆ ನೀವು ಘೋಷಿಸಬಹುದಾದ ಪರಿಹಾರ ಮೌಲಿಕವಾಗಿ ಯಾವ ಯೋಗ್ಯತೆ ಉಳ್ಳದ್ದಾಗಿರುತ್ತದೆ? ಅಸಹಾಯಕ ಜನರ ಜೀವಕ್ಕೆ ಬೆಲೆ ಕಟ್ಟುವ ಒಂದು ದುರಹಂಕಾರದ ಪರಮಾವಧಿಯ ಪ್ರಕ್ರಿಯೆಯಾಗುತ್ತದೆಯೇ ಹೊರತು ಪಶ್ಚಾತ್ತಾಪಪಟ್ಟ ಮನಸ್ಸಿನಿಂದ, ಪ್ರಾಮಾಣಿಕವಾದ ಪ್ರಯತ್ನವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

80ರ ಪ್ರಾಯದಲ್ಲಿರುವ ತಮಗೆ, 71, 72ರ ಪ್ರಾಯದಲ್ಲಿರುವ ನನಗೆ ಬದುಕಿರಲೇಬೇಕೆಂಬ ದೃಢನಿಶ್ಚಯವಿದೆ ಮತ್ತು ನಮ್ಮನ್ನು ಉಳಿಸಿಕೊಳ್ಳಲು ವ್ಯವಸ್ಥೆಯೂ ಇದೆ. ಆದರೆ ನಮ್ಮನ್ನು ಈ ಸ್ಥಾನಗಳಿಗೆ ತಂದ ಜನರ ಜೀವ ಉಳಿಸಲು ವ್ಯವಸ್ಥೆ ಪೂರಕವಾಗಿಲ್ಲ. ಔಪಚಾರಿಕವಾಗಿ ಎಲ್ಲ ಬೆಲೆಯನ್ನು ಕಳೆದುಕೊಂಡಿರುವ ರಾಜಕೀಯ ಭಾಷೆಯಲ್ಲಿ ನೀವು ರಾಜೀನಾಮೆಯನ್ನು ಕೊಡಿ ಎಂದು ಕೇಳುವ ಮೂರ್ಖ ನಾನಲ್ಲ ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ನೀವು ಅಂತಹ ನಿರ್ಧಾರ ಮಾಡಿದರೂ ಸತ್ತವರೇನೂ ಬದುಕಿ ಬರುವುದಿಲ್ಲ ಅಥವಾ ಪರಿಸ್ಥಿತಿಯೂ ಸುಧಾರಿಸುವುದಿಲ್ಲ. ಅದೊಂದು ರಾಜಕೀಯ ಮೇಲಾಟ ಮಾತ್ರ ಆಗುತ್ತದೆ. ನಾವು ಪ್ರಾಣಿ ಪ್ರಪಂಚದಿಂದ ವಿಭಿನ್ನವಾಗಿ ಮನುಷ್ಯ ಲೋಕದಲ್ಲಿ ಇದ್ದೇವೆ. ನಾಗರಿಕ ಸಮಾಜವೆಂದು ಜಂಭ ಕೊಚ್ಚಿಕೊಳ್ಳುತ್ತೇವೆ. ಅಳಲು, ದುಃಖ ದುಮ್ಮಾನಗಳನ್ನು ತೋಡಿಕೊಳ್ಳಲು ಪ್ರಾಣಿಗಳಿಗೆ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.

ಆ ಪ್ರಾಣಿ ಅನುಭವಿಸುವ ನೋವೇ ಮೂಕವೇದನೆ. ಇಂದು ನಮ್ಮೆಲ್ಲರ ಬೇಜವಾಬ್ದಾರಿಯಿಂದ ನಾಗರಿಕ ಸಮಾಜ ಪ್ರಾಣಿಗಳ ರೀತಿಯಲ್ಲೇ ಮೂಕ ವೇದನೆಯನ್ನು ಅನುಭವಿಸುತ್ತಿದೆ. ಮನುಷ್ಯನಿಗೆ ಪಂಚೇಂದ್ರಿಯಗಳು ನಿಷ್ಕ್ರಿಯವಾದ ಮೇಲೆ ಅಂತಹ ಮನುಷ್ಯ ಸಮಾಜಕ್ಕೆ ಹೆಚ್ಚು ಉಪಯುಕ್ತನಾಗುವುದಿಲ್ಲ. ಪಂಚೇಂದ್ರಿಯಗಳು ಸಕ್ರಿಯವಾಗಿರುವ ಮನುಷ್ಯನಿಗೆ ಇಂತಹ ಸನ್ನಿವೇಶದಲ್ಲಿ ನಿರ್ಜೀವ ಹೆಣದಂತೆ ಬಿದ್ದಿರಲೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ನನ್ನನ್ನು ಒಳಗೊಂಡು ನಾವೆಲ್ಲರೂ ಈ ದುರಂತಕ್ಕೆ ಕಾರಣರಾಗಿದ್ದೇವೆ. ಸತ್ತ ಸಂಬಂಧಿಕರ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಬರಲು ಹಣ ಇಲ್ಲದೆ ಸಂಬಂಧಿಕರು ಆ ಶವವನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ. ಇದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತೆ. ಆದರೆ ತಮಗೆ ಮತ್ತು ನನಗೆ ಇದರ ಯಾವುದೇ ರೀತಿಯ ಸಂಬಂಧವಿಲ್ಲದಂತೆ ನಾವು ವರ್ತಿಸಿದ್ಧೇವೆ. ಹೆಮ್ಮಾರಿಗೆ ಬಲಿಯಾಗಿ ಗತಿಸಿ ಹೋದವರ ದಹನಕ್ರಿಯೆಗೆ ಜನ ಪರದಾಡುತ್ತಿದ್ದಾರೆ, ಆದರೂ ನಮ್ಮದೊಂದು ಸಂವಿಧಾನಬದ್ಧವಾಗಿ ಸ್ಥಾಪಿತವಾದ ಜವಾಬ್ದಾರಿಯುತ ನಾಗರಿಕ ಸರಕಾರ. ಎಂತಹ ವಿಪರ್ಯಾಸ ಎಂದು ಅವರು ಟೀಕಿಸಿದ್ದಾರೆ.

ಆಸ್ಪತ್ರೆ ಸಿಗುವುದು ದುರ್ಲಭ, ಹೋದ ಆಸ್ಪತ್ರೆಯಲ್ಲಿ ಆಮ್ಲಜನಕದ ಲಭ್ಯತೆ ಆಸ್ಪತ್ರೆಯ ಜವಾಬ್ದಾರಿಯಲ್ಲ. ಕೃತಕ ಉಸಿರಾಟದ ಯಂತ್ರಗಳು ನಮಗೆ ಸಂಬಂಧವೇ ಇಲ್ಲ. ಭಾರತ ದೇಶದ ಸರ್ವೋಚ್ಚ ನ್ಯಾಯಾಲಯ ದಿಲ್ಲಿ ನಗರವಾಸಿಗಳಿಗೆ ಆಮ್ಲಜನಕ ಪೂರೈಕೆ ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ನೀಡಿರುವ ಸೂಚನೆ ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ಜೀವನದಲ್ಲಿ ಒಂದು ಆಸೆ, ತಾನೇನಾದರೂ ಸಾಧಿಸಬೇಕೆಂಬುದು. ತಮಗೆ ಇನ್ನೇನು ಜೀವನದಲ್ಲಿ ಆಗಬೇಕೆಂಬ ಆಸೆ ಉಳಿದಿದೆ? ಒಂದು ವೇಳೆ ಇದೇ ಸ್ಥಿತಿಯಲ್ಲಿ ಮುಂದುವರೆಯಬೇಕೆಂದು ಇದ್ದರೆ ಯಾವ ಪುರುಷಾರ್ಥಕ್ಕಾಗಿ ಎಂದು ತಿಳಿದುಕೊಳ್ಳುವ ಕುತೂಹಲ ನನಗಿದೆ. ಈ ಮಾತು ನಿಮಗಷ್ಟೇ ಅಲ್ಲ ಸಾರ್ವಜನಿಕ ಜೀವನದಲ್ಲಿ ಇರುವ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಅನ್ವಯಿಸುತ್ತದೆ ಎಂದು ಅವರು ಹೇಳಿದ್ದಾರೆ.

ನಮಗೆ (ರಾಜಕೀಯ ಮುಖಂಡರುಗಳಿಗೆ) ನಾವು ಗಳಿಸಿರುವ ಭ್ರಷ್ಟ ಹಣ ನಮ್ಮ ಖಾಸಗಿ ಬದುಕಿನಲ್ಲಿ ಅಭದ್ರತೆಯನ್ನು ದೂರಮಾಡುತ್ತದೆ. ಹಾಗಾಗಿ ನಮ್ಮ ಹೊಸಲಿಂದಾಚೆಗಿರುವ ನೋವು ನಮ್ಮದಾಗಿರುವುದಿಲ್ಲ. ನಮಗೆ ಅರ್ಥವೂ ಆಗುವುದಿಲ್ಲ. ಆದುದರಿಂದ, ಇಂದು ನಡೆದಿರುವಂತಹ ಭೀಕರ ದುರಂತ ಸನ್ನಿವೇಶಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಾದ ನಮ್ಮ ಪ್ರತಿಕ್ರಿಯೆಗಳು ಅಸಹಜವಾಗಿರುತ್ತೆ, ನಾಟಕೀಯವಾಗಿರುತ್ತೆ. ಈ ನಾಟಕಕ್ಕೆ ಕೊನೆ ಎಂದು? ನಮ್ಮ ಪಂಚೇಂದ್ರಿಯಗಳು ಸಕ್ರಿಯವಾಗುತ್ತೋ ಅಂದು ನಾಟಕ ಅಂತ್ಯವಾಗುತ್ತದೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.

ಇಂತಹ ಅಗ್ನಿ ಪರೀಕ್ಷೆಯ ಸಮಯದಲ್ಲಿ ನಾಟಕ ಮುಂದುವರೆಯುತ್ತೋ ಅಥವಾ ಅಂತ್ಯವಾಗಿ ಪಂಚೇಂದ್ರಿಯಗಳು ಸಕ್ರಿಯವಾಗಿತ್ತೋ ಸಾಮಾನ್ಯ ಜನರಿಗೆ ಸಾಬೀತು ಮಾಡುವ ಹೊಣೆ ನಿಮ್ಮ ಮೇಲಿದೆ. ನನಗೆ ರಾಜಕೀಯ ಪೂರ್ವಗ್ರಹಪೀಡಿತ ಆಲೋಚನೆ ಯಾಗಲಿ ಅಥವಾ ಮತ್ತಾವುದೇ ದುರಾಲೋಚನೆ ಗಳು ಇರುವುದಿಲ್ಲ. ಇದು ಕೇವಲ ನೊಂದ ಮನಸ್ಸಿನ ಹೃದಯಾಂತರಾಳದ ಮಾತುಗಳು. ನಾನು ಯಾವುದೇ ರೀತಿಯ ಆಶ್ಚರ್ಯಕರ ಪ್ರತಿಕ್ರಿಯೆಗಳು ಈ ಪತ್ರಕ್ಕೆ ಸಿಗುತ್ತದೆ ಎಂದು ವಿಶ್ವಾಸಿಸಿಲ್ಲ. ಅದಕ್ಕೆ ಕಾರಣ ಸ್ಥಗಿತಗೊಂಡ ಪಂಚೇಂದ್ರಿಯಗಳು ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X