ಸೌಮ್ಯ ಸ್ವರೂಪದ ಕೋವಿಡ್-19 ರೋಗಿಗಳಿಗೆ ಎದೆಯ ಸಿಟಿ ಸ್ಕ್ಯಾನ್ ಅಗತ್ಯವಿಲ್ಲ: ಏಮ್ಸ್

ಹೊಸದಿಲ್ಲಿ,ಮೇ 3: ಸೌಮ್ಯ ಸ್ವರೂಪದ ಕೋವಿಡ್-19 ರೋಗಿಗಳು ಎದೆಯ ಸಿಟಿ ಸ್ಕ್ಯಾನ್‌ಗಾಗಿ ಧಾವಿಸುವುದರ ವಿರುದ್ಧ ಸೋಮವಾರ ಇಲ್ಲಿ ಎಚ್ಚರಿಕೆ ನೀಡಿದ ಏಮ್ಸ್ ದಿಲ್ಲಿಯ ನಿರ್ದೇಶಕ ರಣದೀಪ ಗುಲೇರಿಯಾ ಅವರು, ಹೆಚ್ಚೇನೂ ಎದೆಯ ಸೋಂಕು ಇಲ್ಲದವರಿಗೆ ಅದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನೇ ಮಾಡುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ಕೋವಿಡ್-19 ಸ್ಥಿತಿಯ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಿಟಿ ಸ್ಕಾನ್ ಪರೀಕ್ಷೆಗಳು ವ್ಯಕ್ತಿಯನ್ನು 300-400 ಕ್ಷ-ಕಿರಣಗಳಿಗೆ ಸಮಾನವಾದ ವಿಕಿರಣಕ್ಕೊಡ್ಡುತ್ತವೆ ಮತ್ತು ಇದು ಭವಿಷ್ಯದಲ್ಲಿ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಸೌಮ್ಯ ಲಕ್ಷಣಗಳಿರುವವರು ಮಾಮೂಲು ಬಯೊಮಾರ್ಕರ್ ರಕ್ತ ಪರೀಕ್ಷೆಗಳಿಗೆ ಒಳಗಾಗಬಾರದು ಮತ್ತು ಅಗತ್ಯವಿಲ್ಲದಿದ್ದಾಗ ಸ್ಟಿರಾಯ್ಡಿಗಳನ್ನು ಬಳಸಬಾರದು. ಇವುಗಳಿಂದ ಪ್ರತಿರೋಧಕ ಶಕ್ತಿ ಉಡುಗುತ್ತದೆ ಮತ್ತು ಹೆಚ್ಚಿನವರಲ್ಲಿ ಕಾಯಿಲೆಯು ಉಲ್ಬಣಿಸಬಹುದು ಎಂದು ಹೇಳಿದರು.
Next Story