Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿದೇಶದಿಂದ ಬಂದಿರುವ ನೆರವಿನ ಸಾಮಾಗ್ರಿಗಳ...

ವಿದೇಶದಿಂದ ಬಂದಿರುವ ನೆರವಿನ ಸಾಮಾಗ್ರಿಗಳ ನಿರ್ವಹಣೆಯಲ್ಲಿ ಗೊಂದಲ: ವಿಮಾನ ನಿಲ್ದಾಣದಲ್ಲೇ ಬಾಕಿಯಾದ ಜೀವರಕ್ಷಕ ಸಾಧನಗಳು

ವಾರ್ತಾಭಾರತಿವಾರ್ತಾಭಾರತಿ4 May 2021 8:46 PM IST
share
ವಿದೇಶದಿಂದ ಬಂದಿರುವ ನೆರವಿನ ಸಾಮಾಗ್ರಿಗಳ ನಿರ್ವಹಣೆಯಲ್ಲಿ ಗೊಂದಲ: ವಿಮಾನ ನಿಲ್ದಾಣದಲ್ಲೇ ಬಾಕಿಯಾದ ಜೀವರಕ್ಷಕ ಸಾಧನಗಳು

ಹೊಸದಿಲ್ಲಿ, ಮೇ 4: ಕೊರೋನ ಸೋಂಕಿನ ವಿರುದ್ಧದ ಹೋರಾಟಕ್ಕೆ ನೆರವು ಘೋಷಿಸಿರುವ ವಿವಿಧ ರಾಷ್ಟ್ರಗಳಿಂದ ಕಳೆದ 5 ದಿನಗಳಿಂದ ಸುಮಾರು 300 ಟನ್‌ಗಳಷ್ಟು ತುರ್ತು ನೆರವು ಸಾಮಾಗ್ರಿಗಳನ್ನು ಹೊತ್ತು ತಂದ 25 ವಿಮಾನಗಳು ದಿಲ್ಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿವೆ. ಆದರೆ ಇವುಗಳ ನಿರ್ವಹಣೆ ಮತ್ತು ವಿತರಣೆಯಲ್ಲಿ ಆಗಿರುವ ಗೊಂದಲದಿಂದ ಜೀವರಕ್ಷಕ ವ್ಯವಸ್ಥೆ ಸಹಿತ ಈ ಸಾಧನಗಳು ಇನ್ನೂ ತುರ್ತು ಅಗತ್ಯವಿರುವ ಆಸ್ಪತ್ರೆಗಳನ್ನು ಸೇರಿಲ್ಲ ಎಂದು ದಿಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

5,500 ಆಮ್ಲಜನಕ ಸಾಂದ್ರಕಗಳು, 3,200 ಆಮ್ಲಜನಕ ಸಿಲಿಂಡರ್‌ಗಳು, 1,36,000 ರೆಮ್‌ಡೆಸಿವಿರ್ ಲಸಿಕೆಗಳ ಸಹಿತ ಸುಮಾರು 300 ಟನ್‌ಗಳಷ್ಟು ತುರ್ತು ನೆರವಿನ ಸಾಮಾಗ್ರಿಗಳು ದಿಲ್ಲಿಯ ವಿಮಾನ ನಿಲ್ದಾಣಕ್ಕೆ ಬಂದಿದ್ದರೂ ಅಲ್ಲಿಂದ ಕೆಲವೇ ಕಿ.ಮೀ ದೂರವಿರುವ ಪ್ರದೇಶಗಳಿಗೆ ತಲುಪಿಲ್ಲ. ನನಗೆ ತಿಳಿದ ಪ್ರಕಾರ, ಇದುವರೆಗೆ ನಮಗೆ ಯಾವ ಸಾಮಾಗ್ರಿಗಳೂ ತಲುಪಿಲ್ಲ ಎಂದು ದಿಲ್ಲಿ ಸರಕಾರದ ಆರೋಗ್ಯ ಇಲಾಖೆಯ ಪ್ರಧಾನ ನಿರ್ದೇಶಕ ಡಾ. ನೂತನ್ ಮುಂಡೇಜಾ ಹೇಳಿದ್ದಾರೆ.

ಎಪ್ರಿಲ್ 30ರ ವೇಳೆಗೆ ಬ್ರಿಟನ್‌ನಿಂದ 500, ಐರ್‌ಲ್ಯಾಂಡ್‌ನಿಂದ 700 ಆಮ್ಲಜನಕದ ಸಾಂದ್ರಕಗಳು ದಿಲ್ಲಿ ವಿಮಾನ ನಿಲ್ದಾಣ ತಲುಪಿವೆ. ಮೇ 2ರಂದು ಅಮೆರಿಕದಿಂದ 1,500 ಆಮ್ಲಜನಕ ಸಿಲಿಂಡರ್‌ಗಳು, ಉಜ್ಬೇಕಿಸ್ತಾನದಿಂದ 150 ಆಮ್ಲಜನಕ ಸಾಂದ್ರಕಗಳು ದಿಲ್ಲಿ ವಿಮಾನ ನಿಲ್ದಾಣ ತಲುಪಿವೆ. ಫ್ರಾನ್ಸ್‌ನಿಂದ ಬಂದಿರುವ ಆಮ್ಲಜನಕ ಉತ್ಪಾದನಾ ಘಟಕಗಳನ್ನು 8 ಆಸ್ಪತ್ರೆಗಳಿಗೆಂದು ನಿಗದಿಗೊಳಿಸಿದ್ದು ಇದರಲ್ಲಿ ದಿಲ್ಲಿಯ 6 ಆಸ್ಪತ್ರೆಗಳಿವೆ. ಇದರ ಹೊರತಾಗಿ, ಉಳಿದ ತುರ್ತು ನೆರವಿನ ಸಾಮಾಗ್ರಿಗಳು ಎಲ್ಲಿಗೆ ರವಾನೆಯಾಗಬೇಕಿವೆ ಎಂಬ ಬಗ್ಗೆ ಯಾರಲ್ಲೂ ಸ್ಪಷ್ಟ ಮಾಹಿತಿಯಿಲ್ಲ. ದಿಲ್ಲಿಗೆ ಮಾತ್ರವಲ್ಲ, ಇತರ ರಾಜ್ಯಗಳಿಗೂ ಈ ತುರ್ತು ನೆರವಿನ ಸಾಮಾಗ್ರಿಗಳು ರವಾನೆಯಾಗಿಲ್ಲ. ದೇಶದ ಒಳಗಿನ ಗಮ್ಯಸ್ಥಾನಗಳಿಗೆ ರವಾನೆಯಾಗಿರುವ ಕೋವಿಡ್ ಸೋಂಕಿಗೆ ಸಂಬಂಧಿಸಿದ ವೈದ್ಯಕೀಯ ನೆರವಿನ ಕುರಿತ ದಾಖಲೆ ತಮ್ಮಲ್ಲಿಲ್ಲ ಎಂದು ದಿಲ್ಲಿ ವಿಮಾನನಿಲ್ದಾಣದ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ಸಚಿವರ ತಂಡ ಮತ್ತು ಅಧಿಕಾರಿಗಳು ರಾಜ್ಯ ಸರಕಾರ ಸಲ್ಲಿಸುವ ನೆರವಿನ ಕೋರಿಕೆಯ ಬಗ್ಗೆ ಗಮನ ಹರಿಸುತ್ತವೆ ಎಂದು ವಿದೇಶ ವ್ಯವಹಾರ ಇಲಾಖೆ ತಿಳಿಸಿರುವುದಾಗಿ ‘ದಿ ಹಿಂದು’ ವರದಿ ಮಾಡಿದೆ. ಆದರೆ ತುರ್ತು ನೆರವಿನ ಸಾಮಾಗ್ರಿಗಳಲ್ಲಿ ತಮಗೆ ಪಾಲು ಇದೆಯೇ ಎಂಬ ಬಗ್ಗೆ ಕೇಂದ್ರ ಸರಕಾರ ಯಾವುದೇ ಮಾಹಿತಿ ನೀಡಿಲ್ಲ ಎಂದು 6 ರಾಜ್ಯಗಳ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

ನಮಗೆ ಈ ಸಾಮಾಗ್ರಿಗಳ ಅಗತ್ಯ ಬಹಳವಿದೆ. ಆದರೆ ಇವು ಭಾರತಕ್ಕೆ ಬಂದಿರುವ ಬಗ್ಗೆ ನಮಗೆ ಯಾರೂ ಮಾಹಿತಿ ನೀಡಿಲ್ಲ. ಯಾವ ರಾಜ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಹಂಚಿಕೆಯಾಗಿದೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ ಎಂದು ಪಂಜಾಬ್ ಮತ್ತು ತಮಿಳುನಾಡು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ತುರ್ತು ನೆರವಿನ ಸಾಮಾಗ್ರಿ ಭಾರತಕ್ಕೆ ಬಂದಿರುವ ಬಗ್ಗೆ ಅಥವಾ ತಮ್ಮ ರಾಜ್ಯಕ್ಕೆ ಹಂಚಿಕೆಯಾಗಿರುವ ಪ್ರಮಾಣದ ಬಗ್ಗೆ ಕೇಂದ್ರದಿಂದ ಮಾಹಿತಿಯಿಲ್ಲ ಎಂದು ಬಿಹಾರ ಮತ್ತು ಜಾರ್ಖಂಡ್‌ನ ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಆಮ್ಲಜನಕ ಮತ್ತು ಸಾಂದ್ರಕಗಳ ತುರ್ತು ಅಗತ್ಯವಿದೆ. ಆದರೆ ರಾಜ್ಯಕ್ಕೆ ಹಂಚಿಕೆಯಾಗಿರುವ ಬಗ್ಗೆ ಮಾಹಿತಿಯಿಲ್ಲ ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಒಡಿಶಾಕ್ಕೆ ರೆಮ್‌ಡೆಸಿವಿರ್‌ನ ತುರ್ತು ಅಗತ್ಯವಿದ್ದು ತಾನು ರೆಮ್‌ಡೆಸಿವರ್ ಲಸಿಕೆಯ ಬಗ್ಗೆ ಪ್ರತೀ ದಿನ ಕೇಂದ್ರದ ಆರೋಗ್ಯ ಇಲಾಖೆಯ ಕಾರ್ಯದರ್ಶಿಯೊಂದಿಗೆ ಮಾತನಾಡುತ್ತಿದ್ದೇನೆ. ಆದರೆ ಇದು ಭಾರತಕ್ಕೆ ಬಂದಿರುವ ಬಗ್ಗೆ ಅವರು ಮಾಹಿತಿಯೇ ನೀಡಿಲ್ಲ ಎಂದು ಆ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ತ ಕುಮಾರ್ ಮೊಹಾಪಾತ್ರ ಹೇಳಿದ್ದಾರೆ.

 ನೆರವಿನ ಸಾಮಾಗ್ರಿಗಳು ಬರುತ್ತವೆ ಮತ್ತು ಹೋಗುತ್ತವೆ. ಈ ಕುರಿತ ವಿವರವನ್ನು ನೀವು ಕೇಂದ್ರ ಆರೋಗ್ಯ ಇಲಾಖೆಯಿಂದ ಪಡೆಯಬಹುದು ಎಂದು ಕೋವಿಡ್ ನೆರವು ದಾಸ್ತಾನು ಮತ್ತು ನಿರ್ವಹಣೆಯ ಹೊಣೆ ಹೊತ್ತಿರುವ ಕೇಂದ್ರ ಸರಕಾರದ ಸಂಸ್ಥೆಯಾಗಿರುವ ಎಚ್‌ಎಲ್‌ಎಲ್ ಲೈಫ್‌ಕೇರ್‌ನ ಅಧ್ಯಕ್ಷ ಬೆಜಿ ಜಾರ್ಜ್ ಹೇಳಿದ್ದಾರೆ. ಕೋವಿಡ್ ನೆರವು ಸಾಮಾಗ್ರಿಗಳನ್ನು ಕೇಂದ್ರ ಸರಕಾರಕ್ಕೆ ತಲುಪಿಸುವ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯಲ್ಲಿ ಸಿಬಂದಿಗಳ ಕೊರತೆಯಿರುವುದು ಈ ಗೊಂದಲಕ್ಕೆ ಕಾರಣ. ಜೊತೆಗೆ, ಕಸ್ಟಮ್ಸ್ ಕ್ಲಿಯರೆನ್ಸ್ ಪ್ರಕ್ರಿಯೆಯೂ ನಿಧಾನವಾಗಿ ನಡೆಯುವುದು ಪೂರೈಕೆಯಲ್ಲಿ ವಿಳಂಬವಾಗಲು ಕಾರಣ. ಕೇಂದ್ರ ಸರಕಾರ ಕಸ್ಟಮ್ಸ್ ತೆರಿಗೆ ಮನ್ನಾ ಮಾಡಿದ್ದರೂ ಕಸ್ಟಮ್ಸ್ ಅಧಿಕಾರಿಗಳು ಪ್ರತೀ ಸರಕಿನ ಮೌಲ್ಯದ ಬಗ್ಗೆ ಘೋಷಣಾ ಪತ್ರ ಸಲ್ಲಿಸಲು ಒತ್ತಾಯಿಸುತ್ತಿದ್ದಾರೆ ಎಂದು ಸಮಾಜಸೇವಾ ಸಂಸ್ಥೆಯೊಂದರ ಸದಸ್ಯರು ಹೇಳಿದ್ದಾರೆ.

ಪಾರದರ್ಶಕತೆಯ ಕೊರತೆ:

ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಬಹುತೇಕ ಕೋವಿಡ್-19 ನೆರವಿನ ಸಾಮಾಗ್ರಿಗಳನ್ನು ಸರಕಾರೇತರ ಸಂಘಟನೆ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಮೂಲಕ ಕೇಂದ್ರ ಸರಕಾರಕ್ಕೆ ತಲುಪಿಸಲಾಗುತ್ತದೆ. ಕೋವಿಡ್ ನೆರವಿನ ಸಾಮಾಗ್ರಿಗಳನ್ನು ದಾಸ್ತಾನು ಇಡಲು ವಿಮಾನ ನಿಲ್ದಾಣದ ಬಳಿ ತಾತ್ಕಾಲಿಕ ಗೋದಾಮು ಸ್ಥಾಪಿಸಲಾಗಿದೆ.

ಆದರೆ ಕಸ್ಟಮ್ಸ್ ಇಲಾಖೆಯಿಂದ ಕ್ಲಿಯರೆನ್ಸ್ ಪಡೆದ ಸಾಮಾಗ್ರಿಗಳನ್ನು ಪಡೆದು ಅವನ್ನು ಎಚ್‌ಎಲ್‌ಎಲ್ ಲೈಫ್‌ಕೇರ್ ಸಂಸ್ಥೆ(ಕೋವಿಡ್ ನೆರವು ದಾಸ್ತಾನು ಮತ್ತು ನಿರ್ವಹಣೆಯ ಹೊಣೆ ಹೊತ್ತಿರುವ ಕೇಂದ್ರ ಸರಕಾರದ ಸಂಸ್ಥೆ)ಯ ವಶಕ್ಕೆ ಒಪ್ಪಿಸುವುದು ಮಾತ್ರ ತನ್ನ ಕೆಲಸ. ಹಂಚಿಕೆಯನ್ನು ಕೇಂದ್ರ ಆರೋಗ್ಯ ಇಲಾಖೆ ನಿರ್ವಹಿಸುತ್ತದೆ ಎಂದು ರೆಡ್‌ಕ್ರಾಸ್‌ನ ಪ್ರಧಾನ ಕಾರ್ಯದರ್ಶಿ ಆರ್.ಕೆ ಜೈನ್ ಹೇಳಿದ್ದಾರೆ. ಕೆಲವು ಸಾಮಾಗ್ರಿಗಳು ಈಗಲೂ ವಿಮಾನ ನಿಲ್ದಾಣದಲ್ಲಿರುವ ಎಚ್‌ಎಲ್‌ಎಲ್‌ನ ಗೋದಾಮಿನಲ್ಲಿ ಉಳಿದುಕೊಂಡಿದೆ ಎಂದು ಇಂಡಿಯನ್ ರೆಡ್‌ಕ್ರಾಸ್‌ನ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X