ಮೇ 6: ಶುಶ್ರೂಷಕಿ, ಗ್ರೂಪ್ ಡಿ ಹುದ್ದೆಗಳ ತಾತ್ಕಾಲಿಕ ಆಯ್ಕೆಗೆ ನೇರ ಸಂದರ್ಶನ
ಮಂಗಳೂರು, ಮೇ 4: ಜಿಲ್ಲಾದ್ಯಂತ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ (Dedicated Covid Hospital) DCHC ಆಗಿ ಕಾರ್ಯನಿರ್ವಹಿಸುತ್ತಿರುವ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಹಾಗೂ (Dedicated Covid Health Centre ) ಆಗಿ ಕಾರ್ಯನಿರ್ವಸುತ್ತಿರುವ ತಾಲೂಕು ಆಸ್ಪತ್ರೆಗಳಿಗೆ ಶುಶ್ರೂಷಕಿ ಮತ್ತು ಗ್ರೂಪ್ ಡಿ ಹುದ್ದೆಗಳನ್ನು 2021ರ ಸೆಪ್ಟೆಂಬರ್ 30ರವರೆಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಮೇ 6ರಂದು ಪೂ.11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯ ಕಚೇರಿಯಲ್ಲಿ ನೇರ ಸಂದರ್ಶನ ಕರೆಯಲಾಗಿದೆ.
ತಾತ್ಕಾಲಿಕ ಹುದ್ದೆಗಳ ವಿವರ: ಶುಶ್ರೂಷಕಿ ಡಿಸಿಎಚ್ ಹುದ್ದೆಗಳ ಸಂಖ್ಯೆ-19 ಡಿಪ್ಲೊಮಾ ಇನ್ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರ ಬೇಕು. ಗ್ರೂಪ್ ’ಡಿ’ ಡಿಸಿಎಚ್ ಹುದ್ದೆಗಳ ಸಂಖ್ಯೆ-46, ಎಸೆಸೆಲ್ಸಿ ತೇರ್ಗಡೆಯಾಗಿರಬೇಕು, ಶುಶ್ರೂಷಕಿ ಡಿಸಿಎಚ್‌ಸಿ ಹುದ್ದೆಗಳ ಸಂಖ್ಯೆ-5, ಡಿಪ್ಲೊಮಾ ಇನ್ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು. ಗ್ರೂಪ್ ’ಡಿ’ ಡಿಸಿಎಚ್‌ಸಿ ಹುದ್ದೆಗಳ ಸಂಖ್ಯೆ -4, ಎಸೆಸೆಲ್ಸಿ ತೇರ್ಗಡೆಯಾಗಿರಬೇಕು.
ಅಭ್ಯರ್ಥಿಗಳು ವಿದ್ಯಾರ್ಹತೆಯ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಡೀಕೃತ ನಕಲು ಪ್ರತಿಗಳನ್ನು ಸಲ್ಲಿಸಬೇಕು. ಅನುಭವಕ್ಕೆ ಆದ್ಯತೆ ನೀಡಲಾಗುವುದು. ಆದ್ದರಿಂದ ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. (ಈಗಾಗಲೇ ಈ ಕಚೇರಿಗೆ ಅರ್ಜಿಯನ್ನು ಸಲ್ಲಿಸಿದವರು ನೇರ ಸಂದರ್ಶನಕ್ಕೆ ಎಲ್ಲಾ ದಾಖಲಾತಿಗಳೊಂದಿಗೆ ಹಾಜರಾಗಬೇಕು) ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯ ಕಚೇರಿ ದೂ.ಸಂ: 0824-2423672ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







