ದಿಲ್ಲಿಯ ಸೇನಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ
ಹೊಸದಿಲ್ಲಿ, ಮೆ 4: ದೇಶಾದ್ಯಂತ ಆಮ್ಲಜನಕದ ಕೊರತೆ ಸೃಷ್ಟಿಸಿರುವ ಕೊರೋನ ಸೋಂಕಿನ ಎರಡನೇ ಅಲೆ ದಿಲ್ಲಿಯ ಸೇನಾ ನೆಲೆಯ ಆಸ್ಪತ್ರೆಯಲ್ಲೂ ಆಮ್ಲಜನಕದ ಬಿಕ್ಕಟ್ಟು ಉಂಟು ಮಾಡಿದೆ. ಈಗಿರುವ ಮೀಸಲು ಆಮ್ಲಜನಕ ಮುಗಿದು ಕೊರತೆಯಾಗುವ ಬಗ್ಗೆ ದಿಲ್ಲಿಯ ಸೇನಾ ನೆಲೆಯ ಆಸ್ಪತ್ರೆಯ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಎಚ್ಚರಿಸಿದ್ದಾರೆ.
ದಿಲ್ಲಿ ಸರಕಾರದ ಮೂಲಕ ಆಸ್ಪತ್ರೆಗೆ ಆಮ್ಲಜನಕ ಮರು ಪೂರೈಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸೇನೆ ರಕ್ಷಣಾ ಸಚಿವಾಲಯಕ್ಕೆ ತುರ್ತು ಸಂದೇಶ ರವಾನಿಸಿತ್ತು. ದಿಲ್ಲಿ ಕಂಟೋನ್ಮೆಂಟ್‌ನಲ್ಲಿರುವ ಸೇನಾ ನೆಲೆಯ ಆಸ್ಪತ್ರೆಗೆ ಮೀಸಲು ಆಮ್ಲಜನಕವನ್ನು ದಿಲ್ಲಿ ಸರಕಾರ ಕಡಿತಗೊಳಿಸಿತು. ಈ ವಿಷಯವನ್ನು ಸೇನೆಯ ಅಧಿಕಾರಿಗಳು ರಕ್ಷಣಾ ಸಚಿವಾಲಯದ ಮೂಲಕ ಸ್ಥಳೀಯಾಡಳಿತದ ಗಮನಕ್ಕೆ ತಂದಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
Next Story