ಜೆಇಇ ಮೈನ್ಸ್ ಪರೀಕ್ಷೆ ಮುಂದೂಡಿಕೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಮೇ 4: ಮೇ 24ರಿಂದ 28ರವರೆಗೆ ನಿಗದಿಯಾಗಿದ್ದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಮೈನ್ಸ್ ಅನ್ನು ಕೊರೋನ ಸಮಸ್ಯೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಶಿಕ್ಷಣ ಇಲಾಖೆಯ ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್ಟಿಎ) ಹೇಳಿದೆ.
ಎಪ್ರಿಲ್ನಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನೂ ಕೊರೋನ ಸಮಸ್ಯೆಯಿಂದಾಗಿ ಮುಂದೂಡಲಾಗಿತ್ತು. ಇದೀಗ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ನಂತರ ನಡೆಸಲಾಗುವುದು. ಮೇ ಪರೀಕ್ಷೆಗೆ ನೋಂದಣಿ ದಿನಾಂಕವನ್ನೂ ಮುಂದೆ ಘೋಷಿಸಲಾಗುವುದು ಎಂದು ಮಂಡಳಿ ಹೇಳಿದೆ.
Next Story