ಕೊರೋನವೈರಸ್ ಓಡಿಸಲು ನೀರಿನ ಕೊಡ ಹೊತ್ತು ದೇವಸ್ಥಾನದತ್ತ ಸಾಗಿದ ನೂರಾರು ಮಹಿಳೆಯರು!
ಮತ್ತೊಂದು ʼಸೂಪರ್ ಸ್ಪ್ರೆಡರ್ʼ ಎಂದ ನೆಟ್ಟಿಗರು

ಅಹ್ಮದಾಬಾದ್ : ಗುಜರಾತ್‍ನ ಅಹ್ಮದಾಬಾದ್ ಜಿಲ್ಲೆಯ ಸನಂದ್ ತಾಲೂಕಿನ ನವಪುರ ಎಂಬ ಗ್ರಾಮದಲ್ಲಿ "ಕೊರೋನವೈರಸ್ ಅನ್ನು ನಿರ್ಮೂಲನೆಗೊಳಿಸಲು" ನೂರಾರು ಮಹಿಳೆಯರು ತಮ್ಮ ತಲೆಯ ಮೇಲೆ ನೀರಿನ ಕೊಡಗಳನ್ನು ಹೊತ್ತುಕೊಂಡು ದೇವಸ್ಥಾನವೊಂದರತ್ತ ಸಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗ್ರಾಮದ ಸರಪಂಚ ಗಫಾಭಾಯಿ ಠಾಕುರ್ ಸಹಿತ 23 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮೆರವಣಿಗೆ ಮೇ 3ರಂದು ನಡೆದಿದೆಯೆನ್ನಲಾಗಿದ್ದು ವೀಡಿಯೋದಲ್ಲಿ ಮಹಿಳೆಯರು ಹೊತ್ತು ತಂದಿದ್ದ ಕೊಡಗಳ ನೀರನ್ನು ಕೆಲ ಪುರುಷರು ದೇವಸ್ಥಾನದ ಗೋಪುರದಿಂದ ಸುರಿಯುತ್ತಿರುವುದೂ ಕಾಣಿಸುತ್ತದೆ.
ಗ್ರಾಮದ ಬಲಿಯದೇವ್ ದೇವಸ್ಥಾನದ ಗೋಪುರಕ್ಕೆ ನೀರು ಸುರಿದರೆ ಕೊರೋನ ವೈರಸ್ ನಿರ್ಮೂಲನೆಗೊಳ್ಳಲಿದೆ ಎಂದು ಗ್ರಾಮಸ್ಥರು ನಂಬಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
गुजरात के साणंद के मंदिर में हज़ारों लोग जल चढ़ाने के लिए इकट्ठा हुए. सोशल डिस्टेंसिंग और कोरोना प्रोटोकॉल की धज्जियां उड़ाते दिखे लोग. वीडियो वायरल होने के बाद पुलिस हरकत में आई और 23 लोगों को इस मामले में गिरफ़्तार किया. pic.twitter.com/U8hIHeztWG
— The Lallantop (@TheLallantop) May 5, 2021