Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಖುದ್ಸ್ ದಿನಾಚರಣೆ ಅನ್ಯಾಯದ ವಿರುದ್ಧ...

ಖುದ್ಸ್ ದಿನಾಚರಣೆ ಅನ್ಯಾಯದ ವಿರುದ್ಧ ಜಾಗತಿಕ ಪ್ರತಿರೋಧದ ಸಂಕೇತ

ಭಾರತದಲ್ಲಿ ಇರಾನ್ ರಾಯಭಾರಿ ಡಾ. ಅಲಿ ಚೆಗೇನಿ

ವಾರ್ತಾಭಾರತಿವಾರ್ತಾಭಾರತಿ6 May 2021 4:02 PM IST
share
ಖುದ್ಸ್ ದಿನಾಚರಣೆ ಅನ್ಯಾಯದ ವಿರುದ್ಧ ಜಾಗತಿಕ ಪ್ರತಿರೋಧದ ಸಂಕೇತ

ಅಂತರ್ ರಾಷ್ಟ್ರೀಯ ಖುದ್ಸ್ ದಿನಾಚರಣೆ ಐಕ್ಯತೆ, ಧಾರ್ಮಿಕ ಮೌಲ್ಯಗಳಿಗೆ ಗೌರವ ಹಾಗು ಜಾಗತಿಕವಾಗಿ ಮುಸ್ಲಿಮರು ಮತ್ತು ಮುಸ್ಲಿಮೇತರರಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಡುವ ಸ್ಪೂರ್ತಿಯ ಆಚರಣೆ ಹಾಗು ಸಂಕೇತವಾಗಿದೆ. ಈ ದಿನವನ್ನು 1979ರ ಇಸ್ಲಾಮಿಕ್ ಕ್ರಾಂತಿಯ ಬಳಿಕ  ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ ಸ್ಥಾಪಕ ಆಯತುಲ್ಲಾ ಖೊಮೇನಿ ಅವರು ಘೋಷಿಸಿದರು.

ರಮಝಾನ್ ತಿಂಗಳ ಕೊನೆಯ ಶುಕ್ರವಾರವನ್ನು ಖುದ್ಸ್ ದಿನ ಎಂದು ಘೋಷಿಸಿದ ಅವರು ಫೆಲೆಸ್ತೀನಿಯರು ಹಾಗು ವಿಶ್ವಾದ್ಯಂತ ಎಲ್ಲ ದಮನಿತ ಜನರ ಕಾನೂನು ಬದ್ಧ ಹಕ್ಕುಗಳನ್ನು  ಸಮಸ್ತ ಮುಸ್ಲಿಮರು ಹಾಗು ಎಲ್ಲ ದೇಶಗಳ ಮಾನವ ಹಕ್ಕು ಹೋರಾಟಗಾರರು ಒಂದಾಗಿ ಬೆಂಬಲಿಸುವಂತೆ ಕರೆ ನೀಡಿದರು.

ಈ ದಿನ ವಿಶ್ವದ ಯಾವುದೇ ಭಾಗದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ದಮನಕಾರಿ ಶಕ್ತಿಗಳನ್ನು ವಿರೋಧಿಸುವ ದಿನವಾಗಿದೆ.  ವಿಶ್ವಾದ್ಯಂತ ರಮಝಾನ್ ಆಚರಿಸುತ್ತಿರುವವರೆಗೂ ಖುದ್ಸ್ ದಿನವನ್ನು ಆಚರಿಸಲಾಗುವುದು. ಇದು ದೌರ್ಜನ್ಯ, ಅಕ್ರಮ ಸ್ವಾಧೀನ, ಭಯೋತ್ಪಾದನೆ, ವರ್ಣಭೇದ ಹಾಗು ಅನ್ಯಾಯಗಳ ವಿರುದ್ಧದ ಜಾಗತಿಕ ಪ್ರತಿರೋಧ ಆಂದೋಲನದ ಪ್ರಮುಖ  ದಿನವಾಗಿ ಈಗ ಗುರುತಿಸಲ್ಪಟ್ಟಿದೆ.

ಈ ವರ್ಷ ಕೊರೊನ ಸೋಂಕು ವ್ಯಾಪಕವಾಗಿರುವುದರಿಂದ ಈ ಮಹತ್ವದ ದಿನವನ್ನು ಎಲ್ಲ ಜಾಗತಿಕ ಮಾನವ ಹಕ್ಕು ಹೋರಾಟಗಾರರು ಆನ್ ಲೈನ್ ನಲ್ಲಿ ಆಚರಿಸಿ ಇದರ ಮಹತ್ವವನ್ನು ಸಾರುತ್ತಿದ್ದಾರೆ. ವಿಶೇಷವಾಗಿ ಫೆಲೆಸ್ತೀನಿಯರ ವಿರುದ್ಧ ದಶಕಗಳ ಕಾಲ ನಡೆದಿರುವ ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ಸ್ಮರಿಸಿ ಅದನ್ನು ಸದಾ ವಿರೋಧಿಸುವ ಜಾಗೃತಿ ಮೂಡಿಸುತ್ತಿದ್ದಾರೆ.  ಈ ಸಂಕಷ್ಟದ ಸಂದರ್ಭದಲ್ಲೂ ಇಸ್ರೇಲ್ ತನ್ನ ಹಳೆ ಅಮಾನವೀಯ ಕುತಂತ್ರಗಳ ಮೂಲಕ ಫೆಲೆಸ್ತೀನಿ ಜಾಗಗಳನ್ನು ಆಕ್ರಮಿಸುತ್ತಲೇ ಇದೆ. ಯಾವುದೇ ಅಂತರ್ ರಾಷ್ಟ್ರೀಯ ನೀತಿ ನಿಯಮಗಳನ್ನು ಗೌರವಿಸದ ಇಸ್ರೇಲ್  ಈ ಪಿಡುಗಿನ  ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಆಕ್ರಮಿತ ಜೋರ್ಡನ್ ಕಣಿವೆ ಹಾಗು ಪಶ್ಚಿಮ ದಂಡೆಯ ಭಾಗಗಳನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿದೆ.

ಫೆಲೆಸ್ತೀನಿಯರು ಇಂದು ಎದುರಿಸುತ್ತಿರುವ ಸವಾಲು ಇಡೀ ಮನುಕುಲದ ಪಾಲಿನ ಪರೀಕ್ಷೆಯಾಗಿದೆ. ಝಿಯೋನಿಸ್ಟರು ಎಂದಿಗೂ ವಿಶ್ವಾಸಾರ್ಹ ಮಿತ್ರರು ಹಾಗು ಭಾಗೀದಾರರು ಆಗಲಾರರು ಎಂಬುದನ್ನು ಜಗತ್ತು ಅಂತಿಮವಾಗಿ ಅರಿತುಕೊಳ್ಳಲಿದೆ ಮತ್ತು ಎಲ್ಲ ದೇಶಗಳು ಫೆಲೆಸ್ತೀನಿಯರ ಕಾನೂನು ಬದ್ಧ ಹಕ್ಕುಗಳಿಗಾಗಿನ ಅವರ ಹೋರಾಟದಲ್ಲಿ ಅವರನ್ನು ಬೆಂಬಲಸುತ್ತಾರೆ ಎಂಬ ಭರವಸೆ ನಮಗಿದೆ. ಫೆಲೆಸ್ತೀನ್ ಮೇಲೆ ಫೆಲೆಸ್ತೀನಿಯರ ಹಕ್ಕುಗಳನ್ನು ಮತ್ತು ಐತಿಹಾಸಿಕ ವಾಸ್ತವಗಳನ್ನು ನಿರ್ಲಕ್ಷಿಸುವ ಯಾವುದೇ ಒಪ್ಪಂದಗಳು ಸಫಲವಾಗುವುದಿಲ್ಲ.

ಯಾರೂ ನಿಜವಾದ ಶಾಂತಿ ಒಪ್ಪಂದವನ್ನು ವಿರೋಧಿಸುವುದಿಲ್ಲ. ಆದರೆ ಆ ಒಪ್ಪಂದ ಆ ಪ್ರದೇಶದ ಹಾಗು ವಿಶ್ವದ ಸ್ಥಿರತೆಗೆ ಪೂರಕವಾಗುವಂತಿರಬೇಕು. ಝಿಯೋನಿಸ್ಟರಿಂದ  ಫೆಲೆಸ್ತೀನಿಯರಿಗೆ ನ್ಯಾಯ ನಿರಾಕರಣೆ, ಅವರ ಮನೆಗಳ ನಾಶ, ಲಕ್ಷಾಂತರ ಫೆಲೆಸ್ತೀನಿಯರ ಮಾರಣ ಹೋಮ ಇವುಗಳು ಆ ಸಮಸ್ಯೆಯ ಮೂಲವಾಗಿವೆ. ಹಾಗಾಗಿ ಶಾಂತಿ ಒಪ್ಪಂದ ಅನ್ಯಾಯ ಹಾಗು ಮಾನವ ಹಕ್ಕು ಉಲ್ಲಂಘನೆಗಳ ಬುನಾಧಿಯಲ್ಲಿ ಅಸಾಧ್ಯ. ಯಾವಾಗ ದ್ವೇಷ, ಆಕ್ರಮಣ, ಹಿಂಸೆ ಹಾಗು ನರಮೇಧ ಇಲ್ಲವೋ ಆಗ ಮಾತ್ರ ನಿಜವಾದ ಶಾಂತಿ ಸ್ಥಾಪನೆ ಸಾಧ್ಯ. ಸಾಮ್ರಾಜ್ಯಶಾಹಿಗಳ ಆಕ್ರಮಣ ಹಾಗು ಜನಾಂಗೀಯವಾದಕ್ಕೆ ಪ್ರತಿರೋಧ ಒಡ್ಡುವುದನ್ನು ಅಂತರ್ ರಾಷ್ಟ್ರೀಯ ಕಾನೂನುಗಳೇ ಎತ್ತಿ ಹಿಡಿಯುತ್ತವೆ. ಆದರೆ ಇಸ್ರೇಲಿ ಆಡಳಿತ ತನ್ನ ಕುತಂತ್ರದ ಮೂಲಕ ಈ ಪ್ರತಿರೋಧವನ್ನೇ ಉಗ್ರಗಾಮಿ , ಭಯೋತ್ಪಾದನೆ ಎಂಬಂತೆ ಜನಾಭಿಪ್ರಾಯ ರೂಪಿಸಿ  ತನ್ನ ಅಪರಾಧಗಳನ್ನು ಮುಚ್ಚಿ ಹಾಕುತ್ತಿದೆ. ಈ ಮೂಲಕ ಫೆಲೆಸ್ತೀನಿ ಪ್ರದೇಶಗಳ ಮೇಲೆ ತನ್ನ ಅಕ್ರಮ ಸ್ವಾಧೀನವನ್ನು ಇನ್ನಷ್ಟು ಬಲಪಡಿಸಲು ಹಾಗು ಇಡೀ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಇದಕ್ಕೆ ಅಮೇರಿಕ ಹಾಗು ಅದರ ಯುರೋಪಿಯನ್ ಮಿತ್ರರು ನೀಡುತ್ತಿರುವ ಏಕ ಪಕ್ಷೀಯ ಹಾಗು ಸಂಪೂರ್ಣ ಬೆಂಬಲದಿಂದಾಗಿ ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ನಾಗರೀಕರು, 2100ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ. 4400 ಕ್ಕೂ ಹೆಚ್ಚು ಫೆಲೆಸ್ತೀನಿಯರು ಜೈಲು ಸೇರಿದ್ದಾರೆ ಹಾಗು72 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಫೆಲೆಸ್ತೀನಿಯರ ಹಕ್ಕು ಮರಳಿಸುವ ಹಾಗು ವಿಶ್ವಾದ್ಯಂತ ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿ ದುಡಿಯುವಂತೆ ಪ್ರೇರೇಪಿಸುವಲ್ಲಿ ಖುದ್ಸ್ ದಿನಾಚರಣೆ ಪ್ರಮುಖ ಪಾತ್ರ ವಹಿಸುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X