ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪ : ಐವರ ವಿರುದ್ಧ ಮೊಕದ್ದಮೆ
ಕಾರ್ಕಳ, ಮೇ 6: ಜೋಡುರಸ್ತೆ ಮಟನ್‌ಸ್ಟಾಲ್ ಬಳಿ ಮೇ 5ರಂದು ಮಧ್ಯಾಹ್ನ ವೇಳೆ ಲಾಕ್‌ಡೌನ್‌ನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಐವರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮರ್(27), ಅನಿಲ್(28), ಪ್ರಸನ(24), ಸುಮಂತ್(24), ಅಕ್ಷಯ್ (29) ಎಂಬವರು ಬೈಕ್ ನಿಲ್ಲಿಸಿ, ಮಾಸ್ಕ್ ಧರಿಸದೆ ನಿಂತುಕೊಂಡಿದ್ದು, ಇವರೆಲ್ಲ ಒಟ್ಟು ಸೇರಿ ಜಿಲ್ಲಾಡಳಿತ ಆದೇಶ ಮತ್ತು ಕೋವಿಡ್ ನಿಯು ಉಲ್ಲಂಘಿಸಿ ರುವುದಾಗಿ ದೂರಲಾಗಿದೆ.
Next Story





