ಬೆಳ್ತಂಗಡಿ: ಫಲ್ಗುಣಿ ನದಿಯಲ್ಲಿ ಮುಳುಗಿ ಯುವಕ ಮೃತ್ಯು

ಬೆಳ್ತಂಗಡಿ: ಪಡಂಗಡಿ ಗ್ರಾಮದ ಫಲ್ಗುಣಿ ನದಿಯಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಮೃತ ಯುವಕನನ್ನು ಕಾರ್ಯಾಣ ದುಗ್ಗಪ್ಪ ಎಂಬವರ ಪುತ್ರ ನಿಶಾಂತ್ (22) ಎಂದು ಗುರುತಿಸಲಾಗಿದ್ದು, ಈತ ಮತ್ತು ಈತನ 5 ಮಂದಿ ಸ್ನೇಹಿತರು ಸ್ಥಳೀಯ ಹೊಳೆಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ. ಆದರೆ ನಿಶಾಂತ್ ನೀರಿನಲ್ಲಿ ಮುಳುಗಿದ್ದಾಗಿ ತಿಳಿದುಬಂದಿದ್ದು, ಈ ವೇಳೆ ಆತನ ಸ್ನೇಹಿತರು ನಿಶಾಂತ್ ನನ್ನು ಉಳಿಸುವ ಪ್ರಯತ್ನ ನಡೆಸಿ ದಡಕ್ಕ ತಂದಿದ್ದು, ಆ ವೇಳೆಗಾಗಲೇ ನಿಶಾಂತ್ ಮೃತಪಟ್ಟಿದ್ದ ಎಂದು ಯುವಕರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





