ಆಸ್ಪತ್ರೆ ಬಿಲ್ ಪಾವತಿಯಾಗಿಲ್ಲ ಎಂದು ಕೋವಿಡ್ ಸೋಂಕಿತನ ಮೃತದೇಹವನ್ನು ರಸ್ತೆ ಬದಿಯಲ್ಲಿರಿಸಿದ ವೈದ್ಯನ ಬಂಧನ

ಸಾಂದರ್ಭಿಕ ಚಿತ್ರ
ಸೂರತ್ : ಕೋವಿಡ್ ಸೋಂಕಿಗೆ ಬಲಿಯಾದ ವ್ಯಕ್ತಿಯೊಬ್ಬನ ಕುಟುಂಬ ಆಸ್ಪತ್ರೆ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಸೋಂಕಿತನ ಮೃತದೇಹವನ್ನು ಸೂರತ್ನ ಬಮ್ರೋಲಿ ಎಂಬಲ್ಲಿ ರಸ್ತೆ ಬದಿಯಲ್ಲಿರಿಸಿದ ಆರೋಪದ ಮೇಲೆ ಆಸ್ಪತ್ರೆಯ ಮಾಲಿಕರೂ ಆಗಿರುವ ವೈದ್ಯರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವೈದ್ಯ ಡಾ ಜಿತೇಂದರ್ ಪಾಟೀಲ್ ಬಮ್ರೋಲಿಯಲ್ಲಿರುವ ಪ್ರಿಯಾ ಜನರಲ್ ಆಸ್ಪತ್ರೆಯ ಮಾಲಿಕರಾಗಿದ್ದಾರೆ. ಸೂರತ್ ಮುನಿಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ವೈದ್ಯನ ವಿರುದ್ಧ ಕೋವಿಡ್ ನಿಯಮಾವಳಿ ಉಲ್ಲಂಘನೆಗಾಗಿ ದೂರು ದಾಖಲಿಸಿದ ನಂತರ ಆತನನ್ನು ಬಂಧಿಸಲಾಗಿದೆ.
ಪ್ರಿಯಾ ಜನರಲ್ ಆಸ್ಪತ್ರೆಗೆ ಎಪ್ರಿಲ್ 24ರಂದು ಕೋವಿಡ್ ಚಿಕಿತ್ಸೆಗೆ ದಾಖಲಾಗಿದ್ದ ಭಗವಾನ್ ನಾಯ್ಕ್ ಎಂಬವರು ಮೃತಪಟ್ಟಿದ್ದರು, ಆದರೆ ಅವರ ಕುಟುಂಬ ಆಸ್ಪತ್ರೆಯ ರೂ 50,000 ಬಿಲ್ ಪಾವತಿಸಿಲ್ಲ ಎಂದು ಮೃತದೇಹವನ್ನು ರಸ್ತೆ ಬದಿಯಲ್ಲಿ ಆಸ್ಪತ್ರೆ ಇರಿಸಿತ್ತು.
Next Story





