Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಬೆಡ್ ಬ್ಲಾಕಿಂಗ್ ದಂಧೆ ಎಲ್ಲ ಕಡೆಯೂ...

ಬೆಡ್ ಬ್ಲಾಕಿಂಗ್ ದಂಧೆ ಎಲ್ಲ ಕಡೆಯೂ ನಡೆದಿರುವ ಸಾಧ್ಯತೆ ಬಗ್ಗೆ ತನಿಖೆ ಅಗತ್ಯ: ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ

ಬಿಬಿಎಂಪಿ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಕೆ

ವಾರ್ತಾಭಾರತಿವಾರ್ತಾಭಾರತಿ6 May 2021 6:40 PM IST
share

ಬೆಂಗಳೂರು, ಮೇ 6: ಕೋವಿಡ್ ಸಂಬಂಧ ಬಿಬಿಎಂಪಿಯ ಕೋವಿಡ್ ವಾರ್ ರೂಂಗಳಲ್ಲಿ ಬೆಡ್ ಬುಕ್ಕಿಂಗ್ ದಂಧೆ ಕೇವಲ ದಕ್ಷಿಣ ವಲಯಕ್ಕೆ ಮಾತ್ರ ಸೀಮಿತವಲ್ಲದೆ, ಎಲ್ಲ ವಲಯಗಳಲ್ಲೂ ನಡೆದಿರುವ ಸಾಧ್ಯತೆ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.

ಬೆಡ್ ಬ್ಲಾಕಿಂಗ್ ಆರೋಪ ಪ್ರಕರಣ ಸಂಬಂಧ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ನೀಡಿದ ವರದಿಯಲ್ಲಿ ತನಿಖೆ ಕುರಿತು ತುಳಸಿ ಮದ್ದಿನೇನಿ ಉಲ್ಲೇಖಿಸಿದ್ದಾರೆ.

ವಾರ್ ರೂಂಗಳಿಂದ ರೋಗಿಗಳಿಗಾಗಿ ಬೆಡ್(ಹಾಸಿಗೆ) ಬ್ಲಾಕ್ ಮಾಡಿದ ಪೈಕಿ ಶೇ.50ರಷ್ಟು ಹಾಸಿಗೆಗಳು ಅನ್‍ಬ್ಲಾಕ್ ಆಗುತ್ತಿವೆ. ಹನ್ನೆರಡು ಗಂಟೆಯೊಳಗೆ ರೋಗಿಗಳು ದಾಖಲಾಗದೇ ಇರುವುದೇ ಇದಕ್ಕೆ ಕಾರಣ. ಆಸ್ಪತ್ರೆಗೆ ದಾಖಲಾಗಲು ಇಷ್ಟವಿಲ್ಲ, ಖಾಸಗಿ ಆಸ್ಪತ್ರೆಗೆ ದಾಖಲು, ರೋಗಿಗಳು ಪತ್ತೆಯಿಲ್ಲ ಎಂಬ ಕಾರಣ ನೀಡಿ ಸಿಎಚ್ ಬೆಸ್ ಡಾಟಾದಲ್ಲಿ ದಾಖಲಿಸಿರುವುದು ಕಂಡು ಬಂದಿದೆ.

ನಗರದ ಪ್ರತಿಷ್ಠಿತ 18 ಆಸ್ಪತ್ರೆಗಳಲ್ಲಿ ಎ.19 ರಿಂದ ಮೇ 1ರವರೆಗೆ, 32 ಪ್ರಕರಣಗಳಲ್ಲಿ ಬಿಬಿಎಂಪಿ ಕೋಟಾದ ಬೆಡ್ ಬ್ಲಾಕ್ ಮಾಡಿ, ಕೆಲವೇ ಕ್ಷಣಗಳಲ್ಲಿ ರೋಗಿಗಳನ್ನು ದಾಖಲಿಸಲಾಗಿದೆ. ಈ ಅವಧಿಯಲ್ಲಿ ಪಶ್ಚಿಮ ವಲಯದ ವಾರ್ ರೂಂನಿಂದ 8, ಬೊಮ್ಮನಹಳ್ಳಿ 6, ದಕ್ಷಿಣ ವಲಯ 5, ಯಲಹಂಕ ಹಾಗೂ ಪೂರ್ವ ವಲಯ ತಲಾ 3, ಮಹದೇವಪುರ-ಆರ್‍ಆರ್ ನಗರ ಹಾಗೂ ಎಸ್‍ಯು ಕಡೆಯಿಂದ ತಲಾ ಎರಡು ಹಾಸಿಗೆಗಳನ್ನು ಬ್ಲಾಕ್ ಮಾಡಿದ ಕೆಲವೇ ಸೆಕೆಂಡ್, ನಿಮಿಷಗಳಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿರುವುದು ವರದಿಯಲ್ಲಿ ತಿಳಿಸಿದ್ದಾರೆ.

ಹೀಗಾಗಿ ಇದರಲ್ಲಿ ಆಸ್ಪತ್ರೆಗಳಲ್ಲಿ ಪಾಲಿಕೆಯಿಂದ ನೇಮಕವಾಗಿರುವ ಆರೋಗ್ಯ ಮಿತ್ರ, ಆಸ್ಪತ್ರೆಯಲ್ಲಿ ಹಾಸಿಗೆ ನೀಡುವ ಉಸ್ತುವಾರಿ ಹೊತ್ತವರು, ವಿವಿಧ ವಲಯಗಳು ಹಾಗೂ 108 ರಲ್ಲಿನ ಹಾಸಿಗೆ ಕಾಯ್ದಿರಿಸುವ ಸಿಬ್ಬಂದಿ ತನಿಖೆ ಅಗತ್ಯವಾಗಿದೆ. ಜೊತೆಗೆ, ಯಾರು ಹಾಸಿಗೆಗಳನ್ನು ಬುಕ್ಕಿಂಗ್ ಮಾಡಿದ್ದಾರೆ, ತಕ್ಷಣವೇ ಹೇಗೆ ದಾಖಲಿಸಲಾಯಿತು ಎಂಬ ಬಗ್ಗೆಯೂ ಸಮಗ್ರ ತನಿಖೆಯ ಅಗತ್ಯವಿದೆ ಎಂದು ಶಿಫಾರಸ್ಸು ಮಾಡಿದ್ದಾರೆ.

ಅದೇ ರೀತಿ, ಎ.22 ರಿಂದ ಮೇ 2 ರವರೆಗೆ, ಎಂಟೂ ವಲಯಗಳ ವಾರ್ ರೂಂ, ಕೇಂದ್ರ ಕಚೇರಿ ವಾರ್ ರೂಂಗಳಲ್ಲಿ 22,285 ಹಾಸಿಗೆಗಳನ್ನು ಬ್ಲಾಕ್ ಮಾಡಲಾಗಿದೆ. ಆ ಪೈಕಿ 11,010 ರೋಗಿಗಳು ಮಾತ್ರ ದಾಖಲಾಗಿದ್ದಾರೆ. 3,922 ಬೆಡ್ ಸ್ವಯಂ ರದ್ದಾಗಿವೆ. ಈ ಬಗ್ಗೆ ಮುಖ್ಯ ಆಯುಕ್ತರು ರಚಿಸಿದ ತಾಂತ್ರಿಕ ಸಮಿತಿ, ಪ್ರತಿನಿತ್ಯದ ಬೆಡ್ ಬ್ಲಾಕಿಂಗ್ ಡಾಟಾ ಗಮನಿಸಬೇಕು ಹಾಗೂ ಮ್ಯಾನ್ಯುವಲ್ ಅನ್‍ಬ್ಲಾಕ್ ಆಗುತ್ತಿರುವ ಬಗ್ಗೆ ತನಿಖೆ ನಡೆಸಬೇಕಿದೆ ಎಂದೂ ಸಹ ಹೇಳಿದ್ದಾರೆ.

ಅದೇ ರೀತಿ, ರೋಗ ಲಕ್ಷಣ ಇಲ್ಲದಿದ್ದರೂ, ಬೆಡ್ ಅಗತ್ಯ ಇಲ್ಲದಿದ್ದರೂ ಅರ್ಪಣ ತ್ರಿಪಾಠಿ ಎಂಬುವವರ ಹೆಸರಲ್ಲಿ ದಕ್ಷಿಣ ವಲಯದಿಂದ ಬೆಡ್ ಬ್ಲಾಕ್ ಮಾಡಲಾಗಿದೆ. ಆ ಬೆಡ್‍ಗೆ ಕೆಂಪಮ್ಮ ಎಂಬವರು ನಂತರದಲ್ಲಿ ದಾಖಲಾಗುತ್ತಾರೆ. ಈ ಬೆಡ್‍ಗೆ ಕೆಂಪಮ್ಮ ಅವರು ಹಣ ಪಾವತಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ಮಾಡಬೇಕೆಂದು ತುಳಸಿ ಮದ್ದಿನೇನಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಆಸ್ಪತ್ರೆ ಬೆಡ್ ಅಗತ್ಯ ಇರುವವರಿಗೆ ಕ್ಯೂ ಸಿಸ್ಟಂನಲ್ಲಿ ಬೆಡ್ ನೀಡಿದರೆ, ತುರ್ತು ಅಗತ್ಯ ಇರುವವರಿಗೆ ಬೆಡ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಸಣ್ಣಮಟ್ಟದಲ್ಲಿ ಮಾಡಿದ ಸಡಿಲಿಕೆಯೇ ದುರುಪಯೋಗಕ್ಕೆ ಕಾರಣವಾಗಿರಬಹುದು ಎಂದು ತುಳಸಿ ಮದ್ದಿನೇನಿ ಅಭಿಪ್ರಾಯ ಪಟ್ಟಿದ್ದಾರೆ. ಯಾವೆಲ್ಲ ಪ್ರಕರಣಗಳ ತನಿಖೆ ಆಗಬೇಕಿದೆ ಎಂಬ ಬಗ್ಗೆಯೂ ವಿಸ್ತೃತ ವರದಿಯನ್ನು ಮುಖ್ಯ ಆಯುಕ್ತರಿಗೆ ನೀಡಿದ್ದಾರೆ. ಈ ತಂತ್ರಾಂಶ ಸರಿಪಡಿಸುವ, ಮೇಲ್ದರ್ಜೆಗೇರಿಸುವ ಕೆಲಸವೂ ತಾಂತ್ರಿಕ ಸಮಿತಿಯಿಂದ ಚಾಲ್ತಿಯಲ್ಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X