ಕೋವಿಡ್ ನಿಂದ ಬಳಲುತ್ತಿರುವ ಹಿರಿಯ ವಕೀಲ ರಾಜೀವ್ ಧವನ್ ಸ್ವಯಂ ಪ್ರೇರಿತರಾಗಿ ಆಸ್ಪತ್ರೆಯಿಂದ ಬಿಡುಗಡೆ

ಹೊಸದಿಲ್ಲಿ: ಕೋವಿಡ್-19 ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ವಕೀಲ ರಾಜೀವ್ ಧವನ್ ನಾಲ್ಕು ದಿನಗಳಲ್ಲಿ ಸ್ವಯಂಪ್ರೇರಿತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಕ್ಯಾರೆಂಟೈನ್ ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ತನ್ನ ಈ ನಿರ್ಧಾರದಿಂದ ಆಸ್ಪತ್ರೆಯ ಹಾಸಿಗೆಯು ಹೆಚ್ಚು ಅಗತ್ಯವಿರುವ ವ್ಯಕ್ತಿಗೆ ಮುಕ್ತವಾಗುತ್ತದೆ ಎಂದು ಅವರು ಹೇಳಿದ್ದಾರೆ. 74 ರ ವಯಸ್ಸಿನ ಧವನ್ ಮಧುಮೇಹದಿಂದಲೂ ಬಳಲುತ್ತಿದ್ದಾರೆ.
"ಕೋವಿಡ್-19ರಿಂದ ಬಳಲುತ್ತಿರುವ ಕಿರಿಯ ವಯಸ್ಸಿನವರಿಗೆ ಆಸ್ಪತ್ರೆಯ ಹಾಸಿಗೆಯ ಅಗತ್ಯವಿದೆ ಹಾಗೂ ನಾನು ಅದನ್ನು ನಿರ್ಬಂಧಿಸಬಾರದು" ಎಂದು ಧವನ್ ಅವರು ವರದಿಗಾರ ಉಶಿನೋರ್ ಮಜುಂದಾರ್ ಗೆ ತಿಳಿಸಿದರು. ಮಜುಂದಾರ್ ಟ್ವಿಟರ್ ಮೂಲಕ ಇಂದು ಸಂಜೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಧವನ್ ಅವರನ್ನು ಬುಧವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಇದೀಗ ಅವರು ತಮ್ಮ ಮನೆಗೆ ಮರಳಿದ್ದಾರೆ.
Next Story





