ಕಲಾವಿದ ಜನಾರ್ದನ ಹಾವಂಜೆಗೆ ಪಿಎಚ್‌ಡಿ

ಉಡುಪಿ, ಮೇ 6: ಖಾತ್ಯ ಚಿತ್ರಕಲಾವಿದ ಜನಾರ್ದನ ಹಾವಂಜೆ ಅವರು ಉಡುಪಿ ಎಂಜಿಎಂ ಕಾಲೇಜಿನ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ (ಆರ್‌ಸಿಸಿ)ದ ಮೂಲಕ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಜನಾರ್ದನ ಹಾವಂಜೆ ಅವರು ಆರ್‌ಆರ್‌ಸಿಯ ನಿವೃತ್ತ ಸಂಶೋಧಕ ಡಾ. ಅಶೋಕ್ ಆಳ್ವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಸಲ್ಲಿಸಿದ ‘ಕಾವಿ ಭಿತ್ತಿಚಿತ್ರ ಕಲೆ- ಒಂದು ಅಧ್ಯಯನ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. ಜನಾರ್ದನ ಹಾವಂಜೆ ಯಕ್ಷಗುರು ಹಾವಂಜೆ ಮಂಜುನಾಥ ರಾವ್ ಹಾಗೂ ಲೀಲಾವತಿ ಎಂ. ರಾವ್ ಇವರ ಪುತ್ರರಾಗಿದ್ದು, ಪ್ರಸ್ತುತ ಮಂಗಳೂರು ವಳಚ್ಚಿಲ್‌ನ ಶ್ರೀನಿವಾಸ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಸಹಾಯಕ ಪ್ರಾಧ್ಯಾ ಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Next Story





