ಗ್ರಾಮೀಣ ಸೇವೆಗೆ ನಿಯೋಜನೆಗೊಳ್ಳುವ ವೈದ್ಯರ ಮಾಸಿಕ ಸಂಭಾವನೆ ಪರಿಷ್ಕರಣೆ

ಬೆಂಗಳೂರು, ಮೇ 6: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗ್ರಾಮೀಣ ಸೇವೆಗೆ ನಿಯೋಜನೆಗೊಳ್ಳುವ ಅಭ್ಯರ್ಥಿಗಳ ಮಾಸಿಕ ಸಂಭಾವನೆಯನ್ನು ಪ್ರಸಕ್ತ ಸಾಲಿನ ಮಾ.31ರವರೆಗೆ ಎಂಬಿಬಿಎಸ್ ಪದವೀಧರರಿಗೆ ಸಂಬಂಧಿಸಿದಂತೆ 62,666 ರೂ.ಗಳನ್ನು ನಿಗದಿಪಡಿಸಿದೆ.
ಮುಂದುವರಿದು ಸ್ನಾತಕೋತ್ತರ ಪದವಿ, ಡಿಪ್ಲೊಮಾ ಇವರಿಗೆ ಮಾ.31ರವರೆಗೆ 67,615 ರೂ.ಗಳನ್ನು ಹಾಗೂ ಎ.1ರಿಂದ 70 ಸಾವಿರ ರೂ.ಗಳಿಗೆ ಪರಿಷ್ಕರಿಸಿ ಹಾಗೂ ಕಡ್ಡಾಯ ಗ್ರಾಮೀಣ ಸೇವೆಗೆ ನಿಯೋಜನೆಗೊಳ್ಳುವ ಅಭ್ಯರ್ಥಿಗಳಿಗೆ ವಾರ್ಷಿಕ 10 ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
Next Story





