ಮ್ಯಾಡ್ರಿಡ್ ಓಪನ್: ಆಶ್ಲೇ ಬಾರ್ಟಿ ಫೆನಲ್‌ಗೆ

ಮ್ಯಾಡ್ರಿಡ್: ವಿಶ್ವದ ನಂ.1 ಟೆನಿಸ್ ಆಟಗಾರ್ತಿ ಆಸ್ಟ್ರೇಲಿಯದ ಅಶ್ಲೇ ಬಾರ್ಟಿ ಮ್ಯಾಡ್ರಿಡ್ ಓಪನ್ ಟೆನಿಸ್‌ನ ಮಹಿಳೆಯರ ಸಿಂಗಲ್ಸ್ ನಲ್ಲಿ ಫೈನಲ್ ಪ್ರವೇಶಿಸಿದರು.
25 ರ ಹರೆಯದ ಬಾರ್ಟಿ ಅವರು ಸ್ಪೇನ್‌ನ ವೈಲ್ಡ್ ಕಾರ್ಡ್ ಪಡೆದ ಆಟಗಾರ್ತಿ ಪೌಲಾ ಬಾಡೋಸ ವಿರುದ್ಧ 6-4, 6-3 ಅಂತರದಲ್ಲಿ ಜಯ ಗಳಿಸಿ ಫೈನಲ್ ತಲುಪಿದರು.
2019ರ ಫ್ರೆಂಚ್ ಓಪನ್ ಚಾಂಪಿಯನ್ ಬಾರ್ಟಿ ಅವರು ಬಳಿಕ 11 ತಿಂಗಳ ಕಾಲ ಕೋವಿಡ್-19 ಕಾರಣದಿಂದಾಗಿ ಟೆನಿಸ್‌ನಿಂದ ದೂರ ಸರಿದಿದ್ದರು. ಕಳೆದ ತಿಂಗಳ ಸ್ಟಟ್‌ಗಾರ್ಟ್ ಓಪನ್‌ನಲ್ಲಿ ಆಡುವ ಮೂಲಕ ಮತ್ತೆ ಸ್ಪರ್ಧಾತ್ಮಕ ಟೆನಿಸ್‌ಗೆ ವಾಪಸಾಗಿದ್ದರು. ಮ್ಯಾಡ್ರಿಡ್ ಫೈನಲ್‌ನಲ್ಲಿ ಬಾರ್ಟಿ ಅವರು ಅನಸ್ತಾಸಿಯಾ ಪಾವಲ್ಯುಚೆಂಕೋವಾ ಅಥವಾ ಆರ್ಯನಾ ಸಬಲೆಂಕಾ ಅವರನ್ನು ಎದುರಿಸಲಿದ್ದಾರೆ.
Next Story