ಡೊಮಿನಿಕ್ ಥೀಮ್ ಕ್ವಾರ್ಟರ್ ಫೆನಲ್‌ಗೆ
ಮ್ಯಾಡ್ರಿಡ್ ಓಪನ್

ಮ್ಯಾಡ್ರಿಡ್: ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ಅವರನ್ನು 7-6 (9/7), 6-4 ನೇರ ಸೆಟ್‌ಗಳಿಂದ ಸೋಲಿಸಿ ಡೊಮಿನಿಕ್ ಥೀಮ್ ಗುರುವಾರ ಮ್ಯಾಡ್ರಿಡ್ ಓಪನ್ ಟೆನಿಸ್‌ನ ಕ್ವಾರ್ಟರ್ ಫೈನಲ್ ತಲುಪಿದರು.
ಯುಎಸ್ ಓಪನ್ ಚಾಂಪಿಯನ್ ಥೀಮ್ ಅವರು ಮಾರ್ಚ್‌ನಲ್ಲಿ ದುಬೈ ನಂತರ ತನ್ನ ಮೊದಲ ಪಂದ್ಯಾವಳಿಯನ್ನು ಆಡುತ್ತಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಆ್ಯಂಡ್ರೆ ರುಬ್ಲೆವ್ ಅಥವಾ ಜಾನ್ ಇಸ್ನರ್ ಅವರನ್ನು ಎದುರಿಸಲಿದ್ದಾರೆ. ಕಝಕಿಸ್ತಾನ್‌ನ ಅಲೆಕ್ಸಾಂಡರ್ ಬುಬ್ಲಿಕ್ ಕೂಡ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅವರು ರಶ್ಯದ ಅಸ್ಲಾನ್ ಕರಟ್ಸೆವ್ ವಿರುದ್ಧ 6-4, 6-3 ಅಂತರದಿಂದ ಜಯಗಳಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
Next Story