ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಉಡುಪಿ: 96 ವಾಹನಗಳು ವಶಕ್ಕೆ
ಉಡುಪಿ, ಮೇ 7: ಜಿಲ್ಲೆಯಲ್ಲಿ ವಿಧಿಸಲಾಗಿರುವ ಲಾಕ್ಡೌನ್ನಲ್ಲಿ ಇಂದು ಅನಗತ್ಯವಾಗಿ ತಿರುಗುತಿದ್ದ ಒಟ್ಟು 96 ವಾಹನಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದಂತೆ ಒಟ್ಟು 12 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಉಡುಪಿ ಉಪವಿಭಾಗದಲ್ಲಿ 13 ದ್ವಿಚಕ್ರ ವಾಹನ, ಕಾರ್ಕಳ ಉಪವಿಭಾಗದಲ್ಲಿ 28 ದ್ವಿಚಕ್ರವಾಹನ, 1ತ್ರಿಚಕ್ರ ವಾಹನ ಹಾಗೂ ಕುಂದಾಪುರ ಉಪವಿಭಾಗದಲ್ಲಿ 55 ದ್ವಿಚಕ್ರವಾಹನಗಳು, ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಕಾರ್ಕಳದಲ್ಲಿ 10 ಹಾಗೂ ಕುಂದಾಪುರದಲ್ಲಿ 2 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
Next Story