ಕಂಗನಾ ರಣಾವತ್ ಗೆ ಕೋವಿಡ್ ಪಾಸಿಟಿವ್
ಮುಂಬೈ: ನಟಿ ಕಂಗನಾ ರಣಾವತ್ ಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇನ್ ಸ್ಟಾಗ್ರಾಮ್ ನಲ್ಲಿ ತನ್ನ ಆರೋಗ್ಯದ ಬಗ್ಗೆ ಅವರು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಮಾಹಿತಿ ನೀಡಿದರು.
ಕಂಗನಾ ಅವರ ಟ್ವಿಟ್ಟರ್ ಹ್ಯಾಂಡಲ್ ಅನ್ನು ಒಂದೆರಡು ದಿನಗಳ ಹಿಂದೆ ಶಾಶ್ವತವಾಗಿ ಸ್ಥಗಿತಗೊಳಿಸಲಾಗಿತ್ತು.
ಯೋಗ ಭಂಗಿಯಲ್ಲಿ ತನ್ನ ಚಿತ್ರವನ್ನು ಹಂಚಿಕೊಂಡಿರುವ ನಟಿ, ಜನರೇ ಯಾವುದೆ ಶಕ್ತಿಗೆ ನಿಮ್ಮ ಮೇಲೆ ಸವಾರಿ ಮಾಡಲು ಅವಕಾಶ ಕೊಡಬೇಡಿ. ಅದು(ವೈರಸ್ ) ನಿಮ್ಮನ್ನು ಹೆಚ್ಚು ಹೆದರಿಸುತ್ತದೆ. ಬನ್ನಿ ಕೋವಿಡ್ ನಾಶಪಡಿಸೋಣ. ಇದು ಸಣ್ಣ ಜ್ವರ. ಆದರೆ ಹೆಚ್ಚು ಒತ್ತಡ ಹಾಕುತ್ತಿದೆ. ಜನರನ್ನು ಮಾನಸಿಕವಾಗಿ ಆತಂಕಕ್ಕೆ ತಳ್ಳಿದೆ. ನಾನು ಕೊರೋನವನ್ನು ಗೆಲ್ಲುವೆ ಎಂದು ಬರೆದಿದ್ದಾರೆ.
ಮೈಕ್ರೋ-ಬ್ಲಾಗಿಂಗ್ ಸೈಟ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ ಕಾರಣ ಕಂಗನಾ ಅವರ ಟ್ವಿಟರ್ ಹ್ಯಾಂಡಲ್ ಅನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ.
ಕಂಗನಾ ಸರಣಿ ಟ್ವೀಟ್‌ಗಳಲ್ಲಿ ಪ.ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಕುರಿತು ಆಕ್ಷೇಪಾರ್ಹ ಬರಹ ಪಡೆದಿದ್ದರು.