ಕೋವಿಡ್ ಬಿಕ್ಕಟ್ಟು: ಆಮ್ಲಜನಕದ ವಿತರಣೆ ನಿರ್ಣಯಿಸಲು ಕಾರ್ಯಪಡೆ ರಚಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಇಡೀ ದೇಶಕ್ಕೆ ಆಮ್ಲಜನಕದ ಲಭ್ಯತೆ ಹಾಗೂ ವಿತರಣೆಯನ್ನು ನಿರ್ಣಯಿಸಲು ಹಾಗೂ ಬದಲಾವಣೆಗಳನ್ನು ಶಿಫಾರಸು ಮಾಡಲು 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯೊಂದನ್ನು ಸುಪ್ರೀಂಕೋರ್ಟ್ ಇಂದು ಸ್ಥಾಪಿಸಿದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದ ಎದ್ದಿರುವ ಸವಾಲುಗಳನ್ನು ಎದುರಿಸಲು ತನ್ನ ಸದಸ್ಯರ ವಿಶೇಷ ಜ್ಞಾನದ ಆಧಾರದ ಮೇಲೆ ಕಾರ್ಯಪಡೆಯು ಕಾರ್ಯತಂತ್ರಗಳನ್ನು ಸಹ ಒದಗಿಸುತ್ತದೆ.
ಕಳೆದ ವಾರ ದೇಶದಲ್ಲಿನ ಆಮ್ಲಜನಕ ಬಿಕ್ಕಟ್ಟಿನ ಕುರಿತಾದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಸಮಿತಿಯೊಂದರ ಸ್ಥಾಪನೆಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು ಹಾಗೂ ಅದರ ಸದಸ್ಯರನ್ನು ಇಂದು ಕೇಂದ್ರ ಸರಕಾರವು ಗುರುತಿಸಿದೆ.
Next Story