ಸಿಕ್ಕಿದ ವಿಮಾನ ಹತ್ತಿ ವಾಪಸ್ ಬನ್ನಿ: ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಅಮೆರಿಕ ಕರೆ
ವಾಶಿಂಗ್ಟನ್, ಮೇ 8: ಕೊರೋನ ವೈರಸ್ನ ಮಾರಕ ದಾಳಿಗೆ ತುತ್ತಾಗಿರುವ ಭಾರತದಲ್ಲಿ ಇರುವ ಅಮೆರಿಕ ಪ್ರಜೆಗಳು ಸಿಕ್ಕಿದ ವಿಮಾನಗಳನ್ನು ಹತ್ತಿ ಅಮೆರಿಕಕ್ಕೆ ವಾಪಸಾಗಬೇಕು ಎಂದು ಶುಕ್ರವಾರ ಸೂಚನೆ ನೀಡಿದೆ.
ಭಾರತಕ್ಕೆ ಪ್ರಯಾಣಿಸದಂತೆ ಅದು ಈಗಾಗಲೇ ತನ್ನ ನಾಗರಿಕರಿಗೆ ಸಲಹೆ ನೀಡಿದೆ.
ಭಾರತ ಮತ್ತು ಅಮೆರಿಕಗಳ ನಡುವೆ ವಾರಕ್ಕೊಮ್ಮೆ ಯುನೈಟೆಡ್ ಏರ್ಲೈನ್ಸ್ ಮತ್ತು ಏರ್ ಇಂಡಿಯ ವಿಮಾನಯಾನ ಸಂಸ್ಥೆಗಳ ನೇರ ವಿಮಾನ ಹಾರಾಟವಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ಅದೂ ಅಲ್ಲದೆ, ಏರ್ ಫ್ರಾನ್ಸ್, ಲುಫ್ತಾನ್ಸ ಮತ್ತು ಖತರ್ ಏರ್ವೇಸ್ನ ವಿಮಾನಗಳು ಪ್ಯಾರಿಸ್, ಫ್ರಾಂಕ್ಫರ್ಟ್ ಮತ್ತು ದೋಹಾಗಳ ಮೂಲಕ ಈ ಎರಡು ದೇಶಗಳ ನಡುವೆ ಒಡಾಡುತ್ತಿವೆ.
Next Story