ಪೊಲೀಸ್ ಠಾಣೆಗಳಿಗೆ ‘ಸ್ಯಾನಿಟೈಸ್’ ಪ್ರಕ್ರಿಯೆ ಆರಂಭ

ಮಂಗಳೂರು, ಮೇ 8: ನಗರ ಪೊಲೀಸ್ ಕಮಿಷನರ್ ಕಚೇರಿ ಸಹಿತ ಕಮಿಷನರೇಟ್ ವ್ಯಾಪ್ತಿಯ 22 ಪೊಲೀಸ್ ಠಾಣೆಗಳನ್ನು ಸ್ಯಾನಿಟೈಸ್ ಮಾಡುವ ಪ್ರಕ್ರಿಯೆ ಶನಿವಾರ ಆರಂಭವಾಗಿದೆ.
ಪೊಲೀಸ್ ಕಮಿಷನರ್ ಕಚೇರಿಯನ್ನು ಮೊದಲು ಸಂಪೂರ್ಣ ಸ್ಯಾನಿಟೈಸ್‌ಮಾಡಲಾಯಿತು. ನಗರದ ಹೌಸ್ ಕೀಪಿಂಗ್ ಸಂಸ್ಥೆ ದುರ್ಗಾ ಫೆಸಿಟಿಲೀಟ್‌ನಿಂದ ಉಚಿತವಾಗಿ ಸ್ಯಾನಿಟೈಸ್ ಮಾಡಿಕೊಡಲಾಗುತ್ತಿದೆ.
ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಮುತುವರ್ಜಿಯಲ್ಲಿ ಪೊಲೀಸ್ ಠಾಣೆಗಳ ಸ್ಯಾನಿಟೈಸ್‌ಗೆ ಚಾಲನೆ ನೀಡಲಾಗಿದೆ. ಕೊರೋನ ಸೋಂಕು ಹರಡುವಿಕೆ ತಡೆಗೆ ಪೊಲೀಸರು ಕೂಡ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗಳನ್ನು ಸ್ಯಾನಿಟೈಸ್‌ಗೆ ಒಳಪಡಿಸಲು ತೀರ್ಮಾನಿಸಲಾಯಿತು ಎಂದು ಸಂಸ್ಥೆಯ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ತಿಳಿಸಿದ್ದಾರೆ.
Next Story





