ಭಾರತೀಯ ಸೇನೆಗೆ 83 ಮಹಿಳಾ ಯೋಧರ ಮೊದಲ ಬ್ಯಾಚ್ ನಿಯೋಜನೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಮೇ 8: ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಆ್ಯಂಡ್ ಸ್ಕೂಲ್ನ 83 ಮಹಿಳಾ ಯೋಧರ ಮೊದಲ ಬ್ಯಾಚ್ ಅನ್ನು ಬೆಂಗಳೂರಿನ ದ್ರೋಣಾಚಾರ್ಯ ಪರೇಡ್ ಮೈದಾನದಲ್ಲಿ ಶನಿವಾರ ಭಾರತೀಯ ಸೇನೆಗೆ ನಿಯೋಜನೆ ಮಾಡಲಾಯಿತು.
ನಿಯೋಜನೆ ಕವಾಯತು ಕೋವಿಡ್ ಶಿಷ್ಟಾಚಾರಗಳೊಂದಿಗೆ ಸರಳವಾಗಿ ನಡೆಯಿತು. ಕವಾಯತನ್ನು ಪರಿಶೀಲಿಸುವಾಗ ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಆ್ಯಂಡ್ ಸ್ಕೂಲ್ನ ಕಮಾಂಡೆಂಟ್, ನೂತನವಾಗಿ ನಿಯೋಜನೆಯಾದ ಮಹಿಳಾ ಯೋಧರ ಕವಾಯತನ್ನು ಪ್ರಶಂಸಿಸಿದರು. ಅಲ್ಲದೆ, 61 ವಾರಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
Next Story