ಕೊರೋನ ಮುಕ್ತ ಭಾರತಕ್ಕಾಗಿ 1008 ಸೀಯಾಳ ಅಭಿಷೇಕ

ಉಡುಪಿ, ಮೇ 9: ಕೊರೋನ ಮುಕ್ತ ಭಾರತ, ಸಮೃದ್ಧ ಸುಭಿಕ್ಷ ಶಾಂತಿ ಪೂರ್ಣ ನೆಮ್ಮದಿಯ ಭಾರತ ಮತ್ತು ಲೋಕ ಕ್ಷೇಮಕ್ಕಾಗಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಕೊರೋನಾ ಸಂಕಷ್ಟದ ಹೋರಾಟದಲ್ಲಿ ಅದ್ಭುತ ಯಶಸ್ಸು ಸಿಗಲೆಂದು ಪ್ರಾರ್ಥಿಸಿ ಉಡುಪಿ ಮುಚ್ಲುಕೋಡು ಶ್ರೀಸುಬ್ರಹ್ಮಣ್ಯಗೆ 1008 ಸೀಯಾಳ ಅಭಿಷೇಕ ಸೇವೆಯನ್ನು ಇಂದು ಸಲ್ಲಿಸಲಾಯಿತು.
ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಸುಬ್ರಹ್ಮಣ್ಯಗೆ 1008 ಸೀಯಾಳ ಅಭಿಷೇಕ ನೆರವೇರಿಸಲಾಯಿತು.
ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಮೊದಲಾದವರು ಉಪಸ್ಥಿತರಿದ್ದರು.
Next Story





