ದ.ಕ. ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ : 233 ವಾಹನಗಳು ವಶ
ಮಂಗಳೂರು, ಮೇ 9: ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ರವಿವಾರ 24 ಪ್ರಕರಣ ದಾಖಲಿ ಸಲಾಗಿದೆ. ಅಲ್ಲದೆ 233 ವಾಹನ ವಶ ಪಡಿಸಲಾಗಿದೆ. 514 ಮಂದಿಯ ವಿರುದ್ಧ ಮಾಸ್ಕ್ ಉಲ್ಲಂಘನೆ ಕೇಸು ದಾಖಲಿಸಲಾಗಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 190 ವಾಹನ ವಶ,20 ಕೇಸ್, 286 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಜಿಲ್ಲಾ ಗ್ರಾಮಾಂತರದಲ್ಲಿ 4 ಕೇಸ್, 228 ಮಾಸ್ಕ್ ಉಲ್ಲಂಘನೆ ಪ್ರಕರಣ ಹಾಗೂ 43 ವಾಹನ ವಶಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.
Next Story





