ಸೋಮವಾರದಿಂದ ರಾಜ್ಯದ ನಿಗದಿತ ಕೇಂದ್ರಗಳಲ್ಲಿ 18 ರಿಂದ 44 ವಯಸ್ಸಿನವರಿಗೆ ಕೋವಿಡ್ ಲಸಿಕೆ ನೀಡಿಕೆ ಪ್ರಾರಂಭ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 9: ನಾಳೆಯಿಂದ (ಮೇ 10) ರಾಜ್ಯದ ನಿಗದಿತ ಕೇಂದ್ರಗಳಲ್ಲಿ 18 ರಿಂದ 44 ವಯಸ್ಸಿನವರಿಗೆ ಕೋವಿಡ್-19 ಲಸಿಕೆ ನೀಡಲಾಗುವುದು ಮತ್ತು ಈಗಾಗಲೇ ನೋಂದಣಿ ಮಾಡಿಕೊಂಡವರು ತಮಗೆ ಬಂದಿರುವ ಸಂದೇಶವನ್ನು ಪೊಲೀಸರಿಗೆ ತೋರಿಸಿ ಲಸಿಕೆ ಪಡೆಯಲು ತೆರಳಬಹುದು ಎಂದು ರಾಜ್ಯ ಸರಕಾರ ತಿಳಿಸಿದೆ.
18 ರಿಂದ 44 ವಯಸ್ಸಿನ ನಡುವಿನ ಫಲಾನುಭವಿಗಳು ಆನ್ಲೈನ್ ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರ ಬೇಕು ಹಾಗೂ ನೋಂದಾವಣೆಯ ನಂತರ ತಮ್ಮ ಮೊಬೈಲ್ ನಲ್ಲಿ ಸಮಯ ಮತ್ತು ದಿನಾಂಕ ನಿಗದಿಯ ಎಸ್ ಎಮ್ ಎಸ್ ಸ್ವೀಕರಿಸಿರಬೇಕು.
ಕಟ್ಟುನಿಟ್ಟಿನ ಲಾಕ್ ಡೌನ್ ಸಂದರ್ಭದಲ್ಲಿ ಫಲಾನುಭವಿಗಳು ಮೊಬೈಲ್ ನಲ್ಲಿ ಸ್ವಿಕರಿಸಿದ ಎಸ್ ಎಮ್ ಎಸ್ ಅನ್ನು ಪರಿಶೀಲಸಿದ ನಂತರವಷ್ಟೇ ಪೊಲೀಸರು ಲಸಿಕಾ ಕೇಂದ್ರಗಳಿಗೆ ತೆರಳಲು ಅನುಮತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





