ಚಿಕ್ಕಮಗಳೂರು: ಮನೆಯ ಹಿತ್ತಲಲ್ಲಿ ಕೊರೋನ ಸೋಂಕಿತ ಮಹಿಳೆ ನರಳಾಡಿ ಮೃತ್ಯು; ಆರೋಪ
ಚಿಕ್ಕಮಗಳೂರು, ಮೇ 9: ಕೊರೋನ ಸೋಂಕಿತ ಮಹಿಳೆಯೊಬ್ಬರು ಮನೆಯ ಹಿತ್ತಲಿನಲ್ಲಿ ನರಳಾಡಿ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಶನಿವಾರ ಜಿಲ್ಲೆಯ ತರೀಕೆರೆ ತಾಲೂಕು ನಂದಿಹೊಸಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ. ಸದ್ಯ ಪ್ರಕರಣ ರವಿವಾರ ಬೆಳಕಿಗೆ ಬಂದಿದೆ.
ತಾಲೂಕಿನ ನಂದಿಹೊಸಳ್ಳಿ ಗ್ರಾಮದ ಸುಂದರಮ್ಮ (45) ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದೆ. ಇವರು ಕೋವಿಡ್ ಸೋಂಕು ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸುಂದರಮ್ಮ ಅವರು ಮೃತಪಟ್ಟು 3ಗಂಟೆ ಕಳೆದರೂ ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಬಂದಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ಸಂಬಂಧ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸುಂದರಮ್ಮ ಅವರ ಸಹೋದರ ಕೃಷ್ಣಪ್ಪ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
Next Story





