ರಕ್ತದ ಕೊರತೆಯನ್ನು ನೀಗಿಸಲು ಮಣಿಪಾಲ ಕೆಎಂಸಿ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ

ಉಡುಪಿ, ಮೇ 9: ನೆಹರು ಸ್ಪೋರ್ಟ್ಸ್ ಕಲ್ಚರಲ್ ಅಸೊಸಿಯೇಶನ್ ಹಾಗೂ ಅಲೆವೂರು ಕಾಂಗ್ರೆಸ್ ಕುಟುಂಬದ ಸದಸ್ಯರು ಕೋವಿಡ್ -19 ಸಂಕಷ್ಟ ಕಾಲ ದಲ್ಲಿ ರಕ್ತದ ಕೊರತೆಯನ್ನು ನೀಗಿಸಲು ಮಣಿಪಾಲ ಕೆಎಂಸಿ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಕೋ ಆರ್ಡಿನೆಟರ್ ಅಲೆವೂರು ಹರೀಶ್ ಕಿಣಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ರಾಪಂ ಸದಸ್ಯ ಶಭರೀಶ್ ಸುವರ್ಣ, ನೆಹರು ಸ್ಪೋರ್ಟ್ಸ್ ಕಲ್ಚರಲ್ ಅಸೋಸಿಯೇಷನ್ನ ಅಧ್ಯಕ್ಷ, ಗ್ರಾಪಂ ಸದಸ್ಯ ಗುರುರಾಜ ಸಾಮಗ, ಸದಸ್ಯರಾದ ರವಿರಾಜ್ ಬದರಿ, ಶ್ರೀಧರ ಪೂಜಾರಿ, ಶರಣ್ ಉಪ್ಪರ್, ರಾಘವೇಂದ್ರ ನಾಯಕ್, ಪ್ರಶಾಂತ ಭಟ್, ನಾಗರಾಜ್, ಶ್ರೀಮತಿ ಮಾಲ, ಸುರೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
Next Story





