ವಾಹನ ಪಲ್ಟಿ ; ಅಪಾಯದಿಂದ ಚಾಲಕ ಪಾರು

ಕಾಪು : ಚಲಿಸುತ್ತಿದ್ದ ಮೀನಿನ ವಾಹನದ ಚಕ್ರ ಸ್ಫೋಟಗೊಂಡು ಹೆದ್ದಾರಿಯಲ್ಲಿ ಮಗುಚಿ ಬಿದ್ದ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಬೀಡು ಬಳಿ ಸಂಭವಿಸಿದೆ.
ಮಲ್ಪೆಯಿಂದ ಮೀನು ತುಂಬಿಕೊಂಡು ಮಂಗಳೂರಿನತ್ತ ಚಲಿಸುತ್ತಿದ್ದ ಟೆಂಪೋ ಪಡುಬಿದ್ರಿ ಬೀಡು ಬಳಿ ತಲುಪಿ ದಾಗ ಮುಂಭಾಗದ ಚಕ್ರ ಸ್ಫೋಟಗೊಂಡು ಹೆದ್ದಾರಿ ಡಿವೈಡರ್ ಮೇಲೇರಿ ಮಗುಚಿ ಬಿದ್ದಿದೆ. ಘಟನೆಯಿಂದ ಚಾಲಕ ಅಪಾಯದಿಂದ ಪಾರಾಗಿದ್ದು, ರಸ್ತೆಯ ಉದ್ದಕ್ಕೂ ಮೀನು ಬಿದ್ದು ಚೆಲ್ಲಾಪಿಲ್ಲಿಯಾಗಿದೆ
Next Story





