ಉತ್ತರಪ್ರದೇಶ: ಪೊಲೀಸರ ಥಳಿತಕ್ಕೆ ವ್ಯಕ್ತಿ ಮೃತ್ಯು

ಲಕ್ನೊ: ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಪೊಲೀಸರ ಥಳಿತಕ್ಕೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ಈ ಘಟನೆ ಮಚ್ರೆಹ್ತಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತನನ್ನು ವಿಜಯ್ ಬಾಲ್ಮಿಕಿ ಎಂದು ಗುರುತಿಸಲಾಗಿದೆ. ಈ ಘಟನೆಯ ಕುರಿತಾಗಿ ತನಿಖೆ ಹಾಗೂ ಕ್ರಮ ಕೈಗೊಳ್ಳುವಂತೆ ಸೀತಾಪುರದ ಹಿರಿಯ ಅಧಿಕಾರಿಗಳು ಸರ್ಕಲ್ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ ಎಂದು TIMES OF INDIA ವರದಿ ಮಾಡಿದೆ.
Next Story





