ಪುದುಚೇರಿ ಸಿಎಂ ರಂಗಸಾಮಿಗೆ ಕೋವಿಡ್ ಪಾಸಿಟಿವ್; ಚೆನ್ನೈನಲ್ಲಿ ಚಿಕಿತ್ಸೆ

ಪುದುಚೇರಿ: ಪುದುಚೇರಿ ಮುಖ್ಯಮಂತ್ರಿ ಎನ್, ರಂಗಸಾಮಿ ಅವರಿಗೆ ರವಿವಾರ ಕೊರೋನ ಸೋಂಕು ತಗಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಇಂದಿರಾಗಾಂಧಿ ಸರಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ರಂಗಸಾಮಿ ರವಿವಾರ ಪರೀಕ್ಷೆ ನಡೆಸಿದಾಗ ಕೊರೋನ ದೃಢಫಟ್ಟಿದೆ ಎಂದು ಆರೋಗ್ಯ ಇಲಾಖೆಯ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
ರಂಗಸಾಮಿ ಆರೋಗ್ಯ ಸ್ಥಿರವಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆದ್ಯತೆ ನೀಡಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ಅವರು ರವಿವಾರ ಸಂಜೆ ಚೆನ್ನೈಗೆ ತೆರಳಿದರು.
Next Story