ಕೊರೋನ ಲಸಿಕೆಗಳ ಪೇಟೆಂಟ್ ಮನ್ನಾ: ಪೋಪ್ ಬೆಂಬಲ

ವ್ಯಾಟಿಕನ್ ಸಿಟಿ, ಮೇ 9: ಕೊರೋನ ವೈರಸ್ ಲಸಿಕೆಗಳನ್ನು ಬಡ ದೇಶಗಳಿಗೆ ಹೆಚ್ಚೆಚ್ಚು ಪ್ರಮಾಣದಲ್ಲಿ ತಲುಪಿಸುವುದಕ್ಕಾಗಿ ಲಸಿಕೆಗಳ ಮೇಲಿನ ಪೇಟೆಂಟ್ ರದ್ದತಿ ಪ್ರಸ್ತಾವಕ್ಕೆ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ವ್ಯಾಕ್ಸ್ ಲೈವ್ ಸಂಗೀತ ಕಚೇರಿಗೆ ನೀಡಿದ ವೀಡಿಯೊ ಸಂದೇಶದಲ್ಲಿ ಅವರು ತನ್ನ ಬೆಂಬಲವನ್ನು ಘೋಷಿಸಿದ್ದಾರೆ.
ಲಸಿಕೆಗಳು ಜಗತ್ತಿನ ಎಲ್ಲರಿಗೂ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ, ಲಸಿಕೆಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕುಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡುವ ಪ್ರಸ್ತಾವಕ್ಕೆ ನನ್ನ ಬೆಂಬಲವಿದೆ ಎಂದು ತನ್ನ ಮಾತೃಭಾಷೆ ಸ್ಪಾನಿಶ್ನಲ್ಲಿ ಮಾತನಾಡಿದ ಅವರು ಹೇಳಿದ್ದಾರೆ.
Next Story





