ದಿಲ್ಲಿಯ ಆಸ್ಪತ್ರೆಯಲ್ಲಿ 80 ಸಿಬ್ಬಂದಿಗೆ ಕೊರೋನ ಸೋಂಕು

ಹೊಸದಿಲ್ಲಿ, ಮೇ 9: ದಿಲ್ಲಿಯ ಸರೋಜ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಸುಮಾರು 80 ವೈದ್ಯಕೀಯ ಸಿಬ್ಬಂದಿ ಹಾಗೂ ಶಸ್ತ್ರಚಿಕಿತ್ಸಾ ತಜ್ಞನಿಗೆ ಕೊರೋನ ಸೋಂಕು ತಗುಲಿದೆ. ಲಸಿಕೆ ಹಾಕಿಸಿಕೊಂಡ ಡಾ. ಎ.ಕೆ. ರಾವತ್ ಅವರು ಶನಿವಾರ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.
‘‘ಎಪ್ರಿಲ್ ಹಾಗೂ ಮೇ ಯಲ್ಲಿ ಸುಮಾರು 80 ವೈದ್ಯಕೀಯ ಸಿಬ್ಬಂದಿ ಹಾಗೂ ಶಸ್ತ್ರಚಿಕಿತ್ಸಾ ತಜ್ಞ ಕೊರೋನ ಸೋಂಕಿಗೆ ಒಳಗಾಗಿದ್ದಾರೆ. ಡಾ. ಎ.ಕೆ. ರಾವತ್ ಅವರು ನನ್ನ ಕಿರಿಯ ಶಸ್ತ್ರಚಿಕಿತ್ಸಾ ತಜ್ಞ. ಅವರು ನಿನ್ನೆ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ’’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪಿ.ಕೆ. ಭಾರದ್ವಾಜ್ ಹೇಳಿದ್ದಾರೆ. ಕೊರೋನ ಸೋಂಕಿನ ಪ್ರಕರಣಗಳ ಹಾಗೂ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿ ನಗರದ ಆಸ್ಪತ್ರೆಗಳು ತುಂಬಿ ತುಳುಕುತ್ತಿರುವ ಸಂದರ್ಭ ಈ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
Next Story





