ಮಾಜಿ ಶಾಸಕ ಮನೋಹರ್ ಕಟ್ಟಿಮನಿ ಕೊರೋನದಿಂದ ನಿಧನ
ಬೆಳಗಾವಿ, ಮೇ 10: ಕೊರೋನ ಸೋಂಕಿಗೆ ಗುರಿಯಾಗಿದ್ದ ಮಾಜಿ ಶಾಸಕ ಮನೋಹರ್ ಕಟ್ಟಿಮನಿ(65) ಅವರು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
1999ರಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಜೆಡಿಯು ಪಕ್ಷದ ಶಾಸಕರಾಗಿ ಮನೋಹರ್ ಕಟ್ಟಿಮನಿ ಆಯ್ಕೆಯಾಗಿದ್ದರು.
Next Story