ಉಡುಪಿ: ಕೋವಿಡ್‌ಗೆ ಮೂವರು ಬಲಿ; 855 ಮಂದಿಗೆ ಕೊರೋನ ಪಾಸಿಟಿವ್
ದಿನದಲ್ಲಿ 642 ಮಂದಿ ಗುಣಮುಖ

ಉಡುಪಿ, ಮೇ 10: ಕೋವಿಡ್-19 ಸೋಂಕಿನಿಂದ ಜಿಲ್ಲೆಯಲ್ಲಿ ಇಂದು ಮೂವರು ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 236ಕ್ಕೇರಿದೆ. ದಿನದಲ್ಲಿ 855 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಇದರೊಂದಿಗೆ 642 ಮಂದಿ ಚಿಕಿತ್ಸೆಯ ಬಳಿಕ ಗುಣಮುಖ ರಾಗಿದ್ದು, ಸದ್ಯ ಜಿಲ್ಲೆಯಲ್ಲಿ 6582 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಸೋಮವಾರ ಸಾವನ್ನಪ್ಪಿದ ಮೂವರಲ್ಲಿ 72 ಮತ್ತು 50 ವರ್ಷ ಪ್ರಾಯದ ಇಬ್ಬರು ಮಹಿಳೆಯರು ಬೈಕಾಡಿ ಹಾಗೂ ಹಾರಾಡಿಯವರಾಗಿದ್ದು, ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟರು. ಎರ್ಮಾಳಿನವರಾದ 73 ವರ್ಷದ ಪುರುಷರು ಇಂದು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಮೂವರು ಕೋವಿಡ್‌ನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ತೀವ್ರ ಉಸಿರಾಟ ತೊಂದರೆ, ನ್ಯೂಮೋನಿಯಾದಿಂದ ಬಳಲುತಿದ್ದರು. ಅಂತಿಮ ಕ್ಷಣದಲ್ಲಿ ಆಸ್ಪತ್ರೆಗೆ ಬಂದ 50 ವರ್ಷದ ಮಹಿಳೆ ಕೆಲವೇ ಗಂಟೆಗಳಲ್ಲಿ ಮೃತಪಟ್ಟರು. 73 ವರ್ಷ ಪ್ರಾಯದ ಪುರುಷರು ಮಧುಮೇಹ ಹಾಗೂ ಕಿಡ್ನಿ ತೊಂದರೆಯಿಂದ ಬಳಲುತಿದ್ದರು ಎಂದು ಹೇಳಲಾಗಿದೆ.
ಸೋಮವಾರ ಪಾಸಿಟಿವ್ ಬಂದ 855 ಮಂದಿಯಲ್ಲಿ 443 ಮಂದಿ ಪುರುಷರು ಹಾಗೂ 412 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 452, ಕುಂದಾಪುರ ತಾಲೂಕಿನ 369 ಹಾಗೂ ಕಾರ್ಕಳ ತಾಲೂಕಿನ 30 ಮಂದಿ ಇದ್ದು, ಉಳಿದ ನಾಲ್ವರು ವಿವಿಧ ಕಾರಣಗಳಿಗಾಗಿ ಚಿಕಿತ್ಸೆಗೆಂದು ಉಡುಪಿ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ.
ರವಿವಾರ 642 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 33,915 ಕ್ಕೇರಿದೆ. ನಿನ್ನೆ ಜಿಲ್ಲೆಯ 2512 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿ ದ್ದಾರೆ. ಇಂದಿನ 855 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 40,733 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,31,012 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
18-44 ವರ್ಷದ 386 ಮಂದಿಗೆ ಲಸಿಕೆ
ಜಿಲ್ಲೆಯ ನಾಲ್ಕು ಲಸಿಕಾ ಕೇಂದ್ರಗಳಲ್ಲಿ ಸೋಮವಾರ 18ರಿಂದ 44 ವರ್ಷ ಪ್ರಾಯದವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭ ಗೊಂಡಿದ್ದು, ಜಿಲ್ಲೆಯಲ್ಲಿ ಮೊದಲ ದಿನ ಒಟ್ಟು 386 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದುಕೊಂಡರು ಎಂದು ಡಿಎಚ್‌ಓ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದರು.
45 ವರ್ಷ ಮೇಲಿನವರಲ್ಲಿ ನಾಲ್ವರು ಮೊದಲ ಡೋಸ್‌ನ್ನು ಪಡೆದರೆ, 1039 ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ. 43 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 36 ಮಂದಿ ಕೊರೋನ ಮುಂಚೂಣಿ ಕಾರ್ಯಕರ್ತರು ಸಹ ಇಂದು ಲಸಿಕೆಯನ್ನು ಪಡೆದಿದ್ದಾರೆ. ಒಟ್ಟಾರೆ ಯಾಗಿ ಜಿಲ್ಲೆಯಲ್ಲಿಂದು 392 ಮಂದಿ ಮೊದಲ ಡೋಸ್‌ನ್ನು ಹಾಗೂ 1116 ಮಂದಿ ಎರಡನೇ ಡೋಸ್ ಸೇರಿದಂತೆ ಒಟ್ಟು 1508 ಮಂದಿ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಡಾ.ಸೂಡ ತಿಳಿಸಿದರು.







