ಉಡುಪಿ: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಅವಕಾಶ
ಉಡುಪಿ, ಮೇ 10: ರಾಜ್ಯಾದ್ಯಂತ ಕೋವಿಡ್-19 ಸೊಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಮೇ 10ರಿಂದ 24ರವರೆಗೆ ಕೊರೋನಾ ಕರ್ಫ್ಯೂ ವಿಧಿಸಲಾಗಿದ್ದು, ಈ ವೇಳೆ ಸರಕಾರದ ಮುಖ್ಯಕಾರ್ಯದರ್ಶಿಗಳ ಮಾರ್ಗಸೂಚಿ ಯಂತೆ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ನ್ಯಾಯಬೆಲೆ ಅಂಗಡಿಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ತಮ್ಮ ವ್ಯಾಪ್ತಿಗೆ ಒಳಪಡುವ ನ್ಯಾಯಬೆಲೆ ಅಂಗಡಿಗಳು ಈ ಕೆಳಕಂಡ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಿ ಪಡಿತರ ವಿತರಣೆ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.
ಪಡಿತರ ವ್ಯವಸ್ಥೆಗೆ ಪ್ರತಿ ತಿಂಗಳು ನಿರ್ವಹಿಸುವ ವೇಳಾಪಟ್ಟಿಯಂತೆ ಕಾರ್ಯ ನಿರ್ವಹಿಸಬೇಕು. ನ್ಯಾಯಬೆಲೆ ಅಂಗಡಿಗಳಿಗೆ ಪಡಿತರದಾರರು ಒಮ್ಮೆಲೇ ಬರದೆ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಅವಶ್ಯಕತೆಗೆ ತಕ್ಕಂತೆ ವಾರ್ಡ್ ವಾರು ಪಡಿತರದಾರರಿಗೆ ಮೊದಲೇ ತಿಳಿಸಿ ಪಡಿತರ ವ್ಯವಸ್ಥೆಯನ್ನು ಈ ವಾರದಿಂದಲೇ ಪ್ರಾರಂಭಿಸಬೇಕು ಎಂದು ತಿಳಿಸಲಾಗಿದೆ.
ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ಸುರಕ್ಷತಾ ಅಂತರ ಕಾಪಾಡಲು ಆರು ಅಡಿಗೊಂದು ಚೌಕವನ್ನು ಕಡ್ಡಾಯವಾಗಿ ಮಾಡಿ ಅದರಂತೆ ಪಡಿತರದಾರ ರನ್ನು ಸಾಲಿನಲ್ಲಿ ನಿಲ್ಲಿಸಿ ಪಡಿತರ ವಿತರಿಸಬೇಕು. ಕೋವಿಡ್-19 ಮಾರ್ಗಸೂಚಿ ಯಂತೆ ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಸುರಕ್ಷಿತಾ ಅಂತರ ಕಾಪಾಡೀಕು. ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಸ್ಯಾನಟೈಸರ್ ಬಳಸುವ ವ್ಯವಸ್ಥೆ ಕಲ್ಪಿಸಬೇಕು.
5ಕೆ.ಜಿ.ಹೆಚ್ಚುವರಿ ಅಕ್ಕಿ:
ಈ ತಿಂಗಳು ಪ್ರತಿ ತಿಂಗಳು ನೀಡಲಾಗುತ್ತಿರುವ ಆಹಾರಾನ್ಯದೊಂದಿಗೆಪ್ರಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆ ಯಲ್ಲಿ ಹೆಚ್ಚುವರಿಯಾಗಿ ಪ್ರತಿ ಪಡಿತರದಾರರಿಗೆ 5 ಕೆ.ಜಿ ಅಕ್ಕಿ ನೀಡುವುದರಿಂದ ಯಾವುದೇ ಕಾರಣಕ್ಕೂ ಹಂಚಿಕೆಯಲ್ಲಿ ವ್ಯತ್ಯಯವಾಗದಂತೆ ರಜಾ ದಿನಗಳ ಲ್ಲಿಯೂ ಸಹ ಪಡಿತರ ವ್ಯವಸ್ಥೆಯನ್ನು ಕಲ್ಪಿಸಬೇಕು ಹಾಗೂ ಈ ಬಗ್ಗೆ ವ್ಯಾಪ್ತಿಯ ಎಲ್ಲಾ ಪಡಿತರದಾರರಿಗೆ ಮಾಹಿತಿಗಳನ್ನು ನೀಡಬೇಕು.
ಹಂಚಿಕೆಯಾಗುವ ಆಹಾರಧಾನ್ಯದ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿ ನಾಮಫಲಕದಲ್ಲಿ ಫ್ಲೆಕ್ಸ್ ಮಾಡಿ ಸಾರ್ವಜನಿಕರಿಗೆ, ಪಡಿತರದಾರರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು. ಆಹಾರಧಾನ್ಯವನ್ನು ಈಗಿನ ವ್ಯವಸ್ಥೆಯಂತೆ ಬಯೋಮೆಟ್ರಿಕ್/ಆಧಾರ್ ಆಧಾರಿತ ಒಟಿಪಿ ಮೂಲಕ ವಿತರಿಸಬೇಕು.
ಈಗಾಗಲೇ ಕೊರೋನ ಕರ್ಫ್ಯೂ ಇರುವುದರಿಂದ ಮತ್ತು ಒಂದು ದೇಶ ಒಂದು ಪಡಿತರ ವ್ಯವಸ್ಥೆ ಜಾರಿಯಾಗಿರುವುದರಿಂದ ವಲಸೆಗಾರರಿಗೆ ತೊಂದರೆ ಆಗದಂತೆ ಅಂತರರಾಜ್ಯ/ಅಂತರಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರು ವುದರಿಂದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಯಾವುದೇ ವರ್ಗದ ಪಡಿತರ ಚೀಟಿಗಳಿಗೆ ಪಡಿತರ ಪಡೆಯಲು ಅವಕಾಶ ಕಲ್ಪಿಸಿರುವುದರಿಂದ ಅಂತಹ ಪ್ರಕರಣದಲ್ಲಿ ನಿಯಮಾನುಸಾರ ಆಹಾರ ಧಾನ್ಯವನ್ನು ವಿತರಿಸಬೇಕು. ಹೆಚ್ಚುವರಿ ಹಂಚಿಕೆ ಅವಶಕವಿದ್ದಲ್ಲಿ ಕೂಡಲೇ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ಕ್ರಮ ತೆಗೆದು ಕೊಳ್ಳಬೇಕು ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







