ಹೆಬ್ರಿ : ಅಂಗಡಿಗಾಗಿ 20 ಕಿ.ಮೀ. ನಡೆದುಕೊಂಡು ಬಂದ ದಿನಸಿ ವ್ಯಾಪಾರಿ !

ಹೆಬ್ರಿ, ಮೇ 10: ಸಂಪೂರ್ಣ ಲಾಕ್‌ಡೌನ್‌ನಲ್ಲಿ ವಾಹನ ಬಳಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಭಯಬಿದ್ದು ಅಂಗಡಿ ವ್ಯಾಪಾರಿಯೊಬ್ಬರು ತನ್ನ ಮನೆಯಿಂದ ಅಂಗಡಿಗೆ ಸುಮಾರು 20 ಕಿ.ಮೀ. ನಡೆದುಕೊಂಡು ಹೋಗಿರುವ ಘಟನೆ ಇಂದು ಬೆಳಗ್ಗೆ ಹೆಬ್ರಿ ಸಮೀಪ ನಡೆದಿದೆ.
ಹೆಬ್ರಿಯಿಂದ 12 ಕಿ.ಮೀ. ದೂರದ ಮಾಂಡಮೂರಕೈ ಗುಡ್ಡೆಯಂಗಡಿ ನಿವಾಸಿ ಗೋವಿಂದ(48) ಎಂಬವರು ಹೆಬ್ರಿ ಪೇಟೆಯಲ್ಲಿ ದಿನಸಿ ಅಂಗಡಿಯನ್ನು ಹಲವು ವರ್ಷಗಳಿಂದ ನಡೆಸುತ್ತಿದ್ದರು. ಇವರು ಪ್ರತಿದಿನ ಮನೆಯಿಂದ ಬೈಕಿನಲ್ಲಿ ಹೆಬ್ರಿಗೆ ಬಂದು ವ್ಯಾಪಾರ ನಡೆಸಿಕೊಂಡು ಹೋಗುತ್ತಿದ್ದರು.
ಆದರೆ ಇಂದಿನಿಂದ ಜಾರಿಯಾದ ವಾಹನ ಬಳಕೆ ನಿಷೇಧ ಆದೇಶದಿಂದ ಭೀತಿಗೆ ಒಳಗಾದ ಇವರು, ಬೈಕನ್ನು ಮನೆಯಲ್ಲಿಯೇ ಇರಿಸಿ, ಮನೆಯಿಂದ 12ಕಿ.ಮೀ. ದೂರದ ಅಂಗಡಿ ನಡೆದುಕೊಂಡೇ ಬಂದರು. ಬಳಿಕ 10ಗಂಟೆಯ ವರೆಗೆ ವ್ಯಾಪಾರ ನಡೆಸಿದ ಇವರು ಅಂಗಡಿ ಬಂದ್ ಮಾಡಿ ಮತ್ತೆ ಮನೆಯತ್ತ ನಡೆದುಕೊಂಡೇ ಹೆಜ್ಜೆ ಹಾಕಿದರು. ಇದಕ್ಕಾಗಿ ಇವರು ಸುಮಾರು 3ಗಂಟೆಗಳ ಕಾಲ ನಡೆದಿದ್ದಾರೆ ಎಂದು ತಿಳಿದುಬಂದಿದೆ.
Next Story





