ಆವರಣ ಗೋಡೆಗೆ ಕಾರು ಢಿಕ್ಕಿ: ಚಾಲಕ ಮೃತ್ಯು
ಮಂಗಳೂರು, ಮೇ 10: ರಸ್ತೆ ಬದಿಯ ಆವರಣ ಗೋಡೆಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಸೋಮವಾರ ನಗರದ ಹ್ಯಾಟ್ ಹಿಲ್ ಬಳಿ ನಡೆದಿದೆ.
ನಗರದ ಬಿಜೈ ಕಾಪಿಕಾಡ್ ಕುದ್ಮುಲ್ ಗಾರ್ಡನ್‌ನ ಪಿ.ಎಸ್.ಅಶ್ವತ್ಥ್ ನಾರಾಯಣ (46) ಮೃತಪಟ್ಟ ಕಾರು ಚಾಲಕ.
ಸೋಮವಾರ ಬೆಳಗ್ಗೆ 8 ಗಂಟೆಗೆ ಇವರು ತನ್ನ ಮನೆಯಿಂದ ಹ್ಯಾಟ್‌ಹಿಲ್ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಹ್ಯಾಟ್‌ಹಿಲ್ ಶಾಲೆಯ ಬಳಿ ರಸ್ತೆ ಬದಿಯ ಆವರಣ ಗೋಡೆಗೆ ಕಾರು ಢಿಕ್ಕಿಯಾಯಿತು. ತಕ್ಷಣ ಅಶ್ವಥ್‌ರನ್ನು ಬರ್ಕೆ ಪೊಲೀಸ್ ಠಾಣೆಯ ಹೊಯ್ಸಳ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಅಶ್ವಥ್ ಮೃತಪಟ್ಟಿರುವುದಾಗಿ ತಿಳಿಸಿದರು.
ಈ ಬಗ್ಗೆ ಮಂಗಳೂರು ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





