ಮಂಗಳೂರು ಮನಪಾ ‘ವಾರ್ಡ್ ಟಾಸ್ಕ್ ಫೋರ್ಸ್’ ಸಮಿತಿ ಸಭೆ

ಮಂಗಳೂರು, ಮೇ 10:ಮಂಗಳೂರು ಮಹಾ ನಗರಪಾಲಿಕೆಯ ವ್ಯಾಪ್ತಿಯಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕಾಗಿ ರಚಿಸಲಾಗಿರುವ ವಾರ್ಡ್ ಟಾಸ್‌ಕೆೆರ್ಸ್ ಸಮಿತಿಗಳ ಸಭೆಯು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯ ಅಧ್ಯಕ್ಷತೆಯಲ್ಲಿ ಸೋಮವಾರ ಪಾಲಿಕೆಯ ಸಭಾಂಗಣದಲ್ಲಿ ಜರಗಿತು.
ಕಾರ್ಪೊರೇಟರ್, ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ, ಓರ್ವ ಎಂಪಿಡಬ್ಲ್ಯು ವರ್ಕರ್, ಆಶಾ ಕಾರ್ಯಕರ್ತರು ಮತ್ತು ಸ್ಥಳೀಯರಿರುವ ಟಾಸ್‌ಕೆೆರ್ಸ್ ಸಮಿತಿ ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ವಾರ್ಡ್‌ನ ಸೋಂಕಿತರ ಮಾಹಿತಿ ಸಂಗ್ರಹ, ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವುದನ್ನು ಖಚಿತ ಪಡಿಸಿಕೊಳ್ಳುವುದು, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸುವಂತೆ ಕಾರ್ಯಪಡೆಯ ಸದಸ್ಯರಿಗೆ ಸಭೆಯಲ್ಲಿ ಸೂಚಿಸಲಾಯಿತು.
ಸೋಂಕಿತರ ಮನೆಗಳಿಗೆ ಭಿತ್ತಿಪತ್ರ ಅಂಟಿಸಿ ಇತರರನ್ನು ಜಾಗೃತಗೊಳಿಸಲು, ಒಂದು ಪ್ರದೇಶ ಸೋಂಕಿಗೆ ಒಳಪಟ್ಟರೆ ಅಂತಹ ಏರಿಯಾವನ್ನು ಕಂಟೈನ್ಮೆಂಟ್‌ವಲಯವಾಗಿಸಿ ಸಾರ್ವಜನಿಕರ ಪ್ರವೇಶವನ್ನು ನಿಬರ್ಂಧಿಸುವ ಕಾರ್ಯವನ್ನು ಕಾರ್ಯಪಡೆಗೆ ವಹಿಸಲು, ವಾರ್ಡುಗಳಲ್ಲಿ ಕಾರ್ಯ ಪಡೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಪಾಲಿಕೆ ವತಿಯಿಂದ ವಾಹನಗಳನ್ನು ಒದಗಿಸಲು, ಅಗತ್ಯಬಿದ್ದಲ್ಲಿ ಮೆಡಿಕಲ್ ಕಿಟ್ ವಿತರಿಸಲು ಕ್ರಮ ವಹಿಸಲು, ನಗರಪಾಲಿಕೆ ಸರಹದ್ದಿನ ಪ್ರಾಥಮಿಕ ಕೇಂದ್ರಗಳಲ್ಲಿ ಕೊರೋನ ತಪಾಸಣೆ ಮತ್ತು ವ್ಯಾಕ್ಸಿನ್ ಪಡೆಯುವವರಿಗೆ ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ಹೊರಗಡೆ ತಗಡು ಶೀಟು ಒಳಗೊಂಡ ಶಾಮಿಯಾನ ಹಾಕಲು ಮತ್ತು ಸೋಂಕಿತರು ಮತ್ತು ಕ್ವಾರಂಟೈನ್ ನಲ್ಲಿರುವವರಿಗೆ ಆಹಾರ ಸಾಮಗ್ರಿಗಳನ್ನು ಟಾಸ್‌ಕೆೆರ್ಸ್ ಮೂಲಕ ತರಿಸಿಕೊಳ್ಳಲು ಅವಕಾಶ ನೀಡುವ ಬಗ್ಗೆ ಸಭೆ ತೀರ್ಮಾನಿಸಿತು.
ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಮನಪಾ ಆಯುಕ್ತ ಅಕ್ಷಯ ಶ್ರೀಧರ್, ಪೊಲೀಸ್ ಉಪಾಯುಕ್ತ ಹರಿರಾಂ ಶಂಕರ್, ಪಾಲಿಕೆ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







