ಅಮಿತ್ ಶಾರನ್ನುಬಂಧಿಸಿದ್ದ ಐಪಿಎಸ್ ಅಧಿಕಾರಿ ಕಂದಸ್ವಾಮಿ ತಮಿಳುನಾಡು ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕ

photo: Free press journal
ಚೆನ್ನೈ: 2010 ರಲ್ಲಿ ಸೊಹ್ರಾಬುದ್ದೀನ್ ಶೇಖ್ ಎನ್ ಕೌಂಟರ್ ಪ್ರಕರಣದಲ್ಲಿ ಅಂದಿನ ಗುಜರಾತ್ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರನ್ನು ಬಂಧಿಸಿ ರಾಷ್ಟ್ರಮಟ್ಟದಲ್ಲಿ ಬೆಳಕಿಗೆ ಬಂದಿದ್ದ ಐಪಿಎಸ್ ಅಧಿಕಾರಿ ಪಿ. ಕಂದಸ್ವಾಮಿ ಅವರನ್ನು ಸೋಮವಾರ ತಮಿಳುನಾಡಿನ ನೂತನ ಡಿಎಂಕೆ ಸರಕಾರವು ವಿಚಕ್ಷಣ ಹಾಗೂ ಭ್ರಷ್ಟಾಚಾರ ವಿರೋಧಿ ಇಲಾಖೆಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ನೇಮಕ ಮಾಡಿದೆ.
ವಿರೋಧ ಪಕ್ಷವಾಗಿ ಡಿಎಂಕೆ ಆಗಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಹಲವಾರು ಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ರಾಜ್ಯಪಾಲ ಬನ್ವರ್ಲಿಲಾಲ್ ಪುರೋಹಿತ್ ಹಾಗೂ ವಿಜಿಲೆನ್ಸ್ ಇಲಾಖೆಗೆ ಸಲ್ಲಿಸಿತ್ತು.
ತಮಿಳುನಾಡು ಕೇಡರ್ ನ ಐಪಿಎಸ್ ಅಧಿಕಾರಿಯಾಗಿರುವ ಕಂದಸ್ವಾಮಿ ಅವರು ಉಪ ಡಿಐಜಿ ಅಮಿತಾಬ್ ಠಾಕೂರ್ (ಒಡಿಶಾ ಕೇಡರ್) ಜೊತೆಗೂಡಿ ಅಮಿತ್ ಶಾ ಅವರನ್ನು ಬಂಧಿಸಿದ್ದಾಗ ಸಿಬಿಐ ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಆಗಿದ್ದರು.
2007 ರಲ್ಲಿ ಗೋವಾದಲ್ಲಿ ಬ್ರಿಟಿಷ್ ಹದಿಹರೆಯದವರ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಕಂದಸ್ವಾಮಿ ಹಾಗೂ ಠಾಕೂರ್ ಬಗೆಹರಿಸಿದ್ದರು. ಅಲ್ಲದೆ, ಕಂದಸ್ವಾಮಿ ಅವರು ಎಸ್ಎನ್ಸಿ-ಲಾವಲಿನ್ ಹಗರಣದಲ್ಲಿ ಪಿಣರಾಯಿ ವಿಜಯನ್ (ಈಗಿನ ಕೇರಳ ಮುಖ್ಯಮಂತ್ರಿ) ಅವರನ್ನು ತನಿಖೆ ನಡೆಸಿದ್ದರು.