ಆರೆಸ್ಸೆಸ್ ಅಂಗಸಂಸ್ಥೆ ʼಸೇವಾ ಭಾರತಿʼಗೆ 2,50,000ಡಾಲರ್ ದೇಣಿಗೆ ನೀಡಿದ ಟ್ವಿಟರ್ ಮುಖ್ಯಸ್ಥ: ವ್ಯಾಪಕ ಆಕ್ರೋಶ

ಹೊಸದಿಲ್ಲಿ: ಭಾರತದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸಾಂಕ್ರಾಮಿಕದಿಂದಾಗಿ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವಿಟರ್ ಮುಖ್ಯಸ್ಥ ಜಾಕ್ ಡೋರ್ಸಿ ಒಟ್ಟು 15 ಮಿಲಿಯನ್ ಡಾಲರ್ ಗಳಷ್ಟು ದೇಣಿಗೆ ನೀಡಿದ್ದಾರೆ. ಭಾರತದಲ್ಲಿನ ಕೋವಿಡ್ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಒಟ್ಟು ಮೂರು ಸಂಸ್ಥೆಗಳಿಗೆ ಅವರು ದೇಣಿಗೆ ನೀಡಿದ್ದಾರೆ.
ಆದರೆ, ಇದೀಗ ಈ ಮೂರು ಸಂಸ್ಥೆಗಳಲ್ಲಿ ಆರೆಸ್ಸೆಸ್ ಅಂಗಸಂಸ್ಥೆ ಸೇವಾಭಾರತಿಯೂ ಸೇರಿದ್ದು, ಜನರ ನಡುವೆ ವೈಷಮ್ಯ ಹುಟ್ಟುಹಾಕುವ ಈ ಸಂಸ್ಥೆಗೆ ದೇಣಿಗೆ ನೀಡಿದ್ದು ಸಮಂಜಸವಲ್ಲ ಎಂದು ಸಾಮಾಜಿಕ ತಾಣದಾದ್ಯಂತ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟು 2,50,000 ಮಿಲಿಯನ್ ಡಾಲರ್ (ಸರಿಸುಮಾರು 1,83,00,000ರೂ.) ಅನ್ನು ಆರೆಸ್ಸೆಸ್ ಅಂಗಸಂಸ್ಥೆ ಸೇವಾ ಭಾರತಿಗೆ ನೀಡಿದ್ದಾರೆಂದು ತಿಳಿದು ಬಂದಿದೆ.
ಈ ಕುರಿತು ಟ್ವಿಟರ್ ನಲ್ಲಿ "ದಯವಿಟ್ಟು ದ್ವೇಷ ಬಿತ್ತುವ ಸಂಸ್ಥೆಗಳಿಗೆ ಹಣ ನೀಡಬೇಡಿ. ಕೋವಿಡ್ ಸಂದರ್ಭದಲ್ಲಿ ಸಹಾಯ ಮಾಡುವ ಬದಲು ದ್ವೇಷ ಬಿತ್ತುವ ಕಾರ್ಯವನ್ನು ಸೇವಾ ಭಾರತಿ ನಡೆಸುತ್ತಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುವ ಕೋಮುಗಲಭೆಗಳಲ್ಲೂ ಸೇವಾ ಭಾರತಿಯ ಪಾತ್ರವಿದೆ. ಇಂತಹ ಸಂಸ್ಥೆಗಳಿಗೆ ದೇಣಿಗೆ ನೀಡುವ ಮೊದಲು ಕೊಂಚ ಆಲೋಚನೆ ಮಾಡಿ" ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಕೋವಿಡ್ ಹೆಸರಿನಲ್ಲಿ ಕೋಟ್ಯಂತರ ರೂ. ದೇಣಿಗೆ ಸ್ವೀಕರಿಸಿದ್ದಲ್ಲದೇ ಇದುವರೆಗೂ ಯಾವುದೇ ಪರಿಹಾರ ಕಾರ್ಯಗಳು ನಡೆದಿಲ್ಲ" ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಮ್ಮ ಕಾರ್ಯವನ್ನು ಗುರುತಿಸಿದ್ದು ಸಂತೋಷವಾಗಿದೆ. ನಮ್ಮದು ಸ್ವಯಂಸೇವಕರಿಂದ ನಡೆಸಲ್ಪಡುವ ಲಾಭ ರಹಿತ ಸಂಸ್ಥೆಯಾಗಿದ್ದು, ಹಿಂದೂ ಧರ್ಮದ ಪ್ರಕಾರ ಸರ್ವೇ ಭವಂತು ಸುಖಿನಾ ಎಂಬಂತೆ ನಾವು ಎಲ್ಲರಿಗೂ ಸೇವೆ ಸಲ್ಲಿಸುತ್ತೇವೆ" ಎಂದು ಸೇವಾ ಭಾರತಿಯ ಮಾರ್ಕೆಟಿಂಗ್ ಮತ್ತು ಫಂಡ್ ಡೆವಲಪ್‌ಮೆಂಟ್ ಉಪಾಧ್ಯಕ್ಷ ಸಂದೀಪ್ ಖಡ್ಕೆಕರ್ ಪ್ರತಿಕ್ರಿಯೆ ನೀಡಿದ್ದಾರೆ.
$15 million split between @CARE, @AIDINDIA, and @sewausa to help address the COVID-19 crisis in India. All tracked here: https://t.co/Db2YJiwcqc
— jack (@jack) May 10, 2021
Sewa International of course. https://t.co/VqtaYM95M7
— Aparna Jain (@Aparna) May 11, 2021
Sewa International, recipient of $2.5 million from Twitter, is a wing of the same #RSS-#BJP regime that thinks suffocating dissent and criticism by censoring tweets is a good way to fight a pandemic. https://t.co/FORBcHfJuA
— Pieter Friedrich (@FriedrichPieter) May 11, 2021
The fact that Sewa International is a wing of the #RSS, an Indian paramilitary that's accused not only of pogroms against minorities but of also possibly using funds raised by groups like Sewa to help finance its violence, didn't make you stop & think before donating to them?
— Pieter Friedrich (@FriedrichPieter) May 11, 2021
Dear @jack and everyone else reading this. Please stop funding hate in the times of corona. @SewaUSA is a well-known peddler of hate and bigotry. #COVID19 #Covid19IndiaHelp
— Dilip Mandal (@Profdilipmandal) May 11, 2021
RT requested for rapid awareness! @PKashwan
Great job helping to spread hate and facism across Indian.
— Monica Gill (@Monica_Gill1) May 11, 2021
Reality of Sewa International: https://t.co/YTgSpFUaaz
— Jas Rai (@Jasmine_R310) May 11, 2021
The fraud RSS NGO,. These things exist only on paper.. don't fall into trap of giving them money..
— Saurabh (@Saurabh59555321) May 11, 2021
They will only use it to buy media & supress truth..