ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿನ ಕಾರ್ಮಿಕರು ಕೋವಿಡ್-19 ಶಿಷ್ಟಾಚಾರ ಅನುಸರಿಸುತ್ತಿದ್ದಾರೆ
ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ಸೆಂಟ್ರಲ್ ವಿಸ್ಟಾ ಅವೆನ್ಯೂದ ಪುನರಾಭಿವೃದ್ಧಿಗಾಗಿ 400 ಕಾರ್ಮಿಕರು ದಿಲ್ಲಿಯಲ್ಲಿ ಕರ್ಫ್ಯೂ ಹೇರುವ "ಮುಂಚೆಯೇ" ತೊಡಗಿಸಿಕೊಂಡಿದ್ದಾರೆ ಹಾಗೂ ಕೋವಿಡ್ -19 ಗೆ ಸಂಬಂಧಿಸಿದ ಅಧಿಕೃತ ಮಾರ್ಗಸೂಚಿಗಳ ಪ್ರಕಾರ ಕಾರ್ಮಿಕರು ಸ್ಥಳದಲ್ಲಿಯೇ ಇದ್ದಾರೆ ಎಂದು ಕೇಂದ್ರ ಸರಕಾರವು ಮಂಗಳವಾರ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ.
ದಿಲ್ಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ಸೆಂಟ್ರಲ್ ವಿಸ್ಟಾ ನಿರ್ಮಾಣವನ್ನು ತಡೆಹಿಡಿಯಬೇಕೆಂದು ಕೋರಿ ಸಲ್ಲಿಸರುವ ಅರ್ಜಿಯನ್ನುಬುಧವಾರ ಆಲಿಸುವುದಾಗಿ ನ್ಯಾಯಾಲಯ ಮಂಗಳವಾರ ತಿಳಿಸಿದೆ.
"ಮೇಲ್ಕಂಡ ಕೆಲಸವನ್ನು ಮುಂದುವರಿಸಲು ಮತ್ತು ಮುಂದುವರಿಸಲು ಇಚ್ಛೆ ವ್ಯಕ್ತಪಡಿಸಿದ 250 ಕಾರ್ಮಿಕರಿಗೆ ಸ್ಥಳಾವಕಾಶ ಕಲ್ಪಿಸಲು ಕಾರ್ಯಕ್ಷೇತ್ರದಲ್ಲಿಯೇ ಕೋವಿಡ್ ಕಂಪ್ಲೈಂಟ್ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಈ ಸೌಲಭ್ಯವು ಒದಗಿಸುತ್ತದೆ, ”ಎಂದು ಸರಕಾರ ಹೇಳಿದೆ.
ಸಂಬಂಧಪಟ್ಟ ಎಲ್ಲ ಕಾರ್ಮಿಕರ ಆರೋಗ್ಯ ವಿಮೆಯನ್ನು ಗುತ್ತಿಗೆದಾರನು ಒದಗಿಸಿದ್ದಾನೆ ಹಾಗೂ ಆರ್‌ಟಿ-ಪಿಸಿಆರ್ ಪರೀಕ್ಷೆ, ಪ್ರತ್ಯೇಕತೆ ಹಾಗೂ ವೈದ್ಯಕೀಯ ನೆರವು ನಡೆಸಲು ಪ್ರತ್ಯೇಕ ಸೌಲಭ್ಯವನ್ನು ಸಹ ಸ್ಥಳದಲ್ಲಿ ಒದಗಿಸಲಾಗಿದೆ ಎಂದು ಅದು ನ್ಯಾಯಾಲಯಕ್ಕೆ ತಿಳಿಸಿದೆ.