ಚಂದ್ರದರ್ಶನವಾಗಿಲ್ಲ; ಗುರುವಾರ ಈದುಲ್ ಫಿತ್ರ್: ಖಾಝಿ ಮಾಣಿ ಉಸ್ತಾದ್ ಘೋಷಣೆ
'ಫೆಲಸ್ತೀನಿಯರಿಗಾಗಿ ಪ್ರಾರ್ಥಿಸಲು ಕರೆ'

ಮಂಗಳೂರು : ಇಂದು (ಮೇ 11) ಶವ್ವಾಲ್ ತಿಂಗಳ ಚಂದ್ರದರ್ಶನವಾಗದಿರುವುದರಿಂದ ರಮಝಾನ್ ತಿಂಗಳ 30 ದಿನಗಳ ಉಪವಾಸ ವ್ರತವನ್ನು ಪೂರ್ಣಗೊಳಿಸಿ (ಮೇ 13) ಗುರುವಾರದಂದು ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸಂಯುಕ್ತ ಜಮಾಅತ್ ಹಾಗೂ ದ.ಕ.ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಗುರುವಾರ ಮುಂಜಾನೆ ಅರ್ಹರಿಗೆ ಫಿತ್ರ್ ಝಕಾತ್ ಸಂದಾಯ ಮಾಡಿದ ಬಳಿಕ ಎಲ್ಲರೂ ಅವರವರ ಮನೆಗಳಲ್ಲಿ ಈದ್ ನಮಾಝ್ ಮತ್ತು ಖುತ್ಬಾ ನಿರ್ವಹಿಸಿ, ಸಂಕಷ್ಟದಲ್ಲಿರುವ ಸರ್ವಧರ್ಮಿಯರಿಗೂ ನೆರವು ನೀಡುವ ಮೂಲಕ ಈ ಬಾರಿ ಈದ್ ಆಚರಿಸುವಂತೆ ಖಾಝಿ ಅವರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
ಇಸ್ರೇಲಿ ಸೈನಿಕರಿಂದ ದಾಳಿಗೊಳಗಾಗಿ ಅತೀವ ಸಂಕಷ್ಟ ಎದುರಿಸುತ್ತಿರುವ ಫೆಲೆಸ್ತೀನಿಯರಿಗಾಗಿ ರಮಝಾನ್ ಕೊನೆಯ ದಿನರಾತ್ರಿಯಲ್ಲಿ ಹಾಗೂ ಈದ್ ದಿನದಲ್ಲಿ ಎಲ್ಲರೂ ಪ್ರಾರ್ಥಿಸಬೇಕೆಂದು ಅವರು ಕರೆ ನೀಡಿದ್ದಾರೆ.
Next Story





